ಅನ್ಲಾಕ್ ಆದನಂತರದ ಇತ್ತೀಚಿನ ದಿನಗಳಲ್ಲಿ ಚಾರ್ಮಾಡಿ ಘಾಟಿಯ ವಲಯದಲ್ಲಿ ಎಗ್ಗಿಲ್ಲದೆ ಮೋಜು-ಮಸ್ತಿ ನಡೆಯುತ್ತಿದೆ. ಹಾಗೂ ಹಲವಾರು ಸಮಸ್ಯೆಗಳು ಉಂಟಾಗುತ್ತಿದೆ, ಅಂತಹುದೇ ಒಂದು ಅನಾಹುತ ಇಂದು ಸಂಭವಿಸಿದೆ.
ವಾರಾಂತ್ಯದ ಟ್ರಿಪ್ ಗೆ ಕಾರಿನಲ್ಲಿ ಬಂದಿದ್ದ ಯುವಕರ ತಂಡವೊಂದು, ಮದ್ಯದ ಅಮಲಿನಲ್ಲಿ ಕಾರನ್ನು ಪಲ್ಟಿ ಮಾಡಿದ ಘಟನೆ ಇಂದು ಕೊಟ್ಟಿಗೆಹಾರದ ಮಲಯಮಾರುತದ ಬಳಿ ನಡೆದಿದೆ. ಯುವಕರು ಚಾರ್ಮಾಡಿ ಘಾಟ್ ನ ಫಾಲ್ಸ್ ನೋಡಲು ಬಂದಿದ್ದು ಕುಡಿತದ ಅಮಲಿನಲ್ಲಿ ನಿಯಂತ್ರಣ ತಪ್ಪಿ ಕಾರು ಗುಂಡಿಗೆ ಬಿದ್ದಿದೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಗಳು ಸಂಭವಿಸದೆ ಕಾರಿನಲ್ಲಿದ್ದ ಎಲ್ಲಾ ಯುವಕರು ಸುರಕ್ಷಿತವಾಗಿ ಬದುಕುಳಿದಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಿದ್ದು ನಂತರ ಯುವಕರು ಸ್ಥಳದಿಂದ ತೆರಳಿದ್ದಾರೆ.
ಇನ್ನೊಂದೆಡೆ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ಬಳಿ ಸರಣಿ ಅಪಘಾತವಾಗಿದ್ದು ಸಂಪೂರ್ಣವಾಗಿ 4 ವಾಹನಕ್ಕೆ ಹಾನಿಯುಂಟಾದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಆರು ಗಂಟೆಗಳ ಕಾಲ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅನಾನುಕೂಲ ಉಂಟಾಗಿದ್ದು, ನಂತರ ಪ್ರವಾಸಿಗರ ಮತ್ತು ಇಲಾಖೆಯ ಅಧಿಕಾರಿಗಳ ಸಹಾಯದಿಂದ ವಾಹನ ಸಂಚಾರ ಸಾಧ್ಯವಾಯಿತು. ಮೋಜು ಮಸ್ತಿ ಮಾಡಲು ವೀಕೆಂಡ್ ನಲ್ಲಿ ಬರುವ ಪ್ರವಾಸಿಗರಿಗೆ ಪೊಲೀಸರು ಬ್ರೇಕ್ ಹಾಕಬೇಕಿದೆ.
ವರದಿ : ತನು ಕೊಟ್ಟಿಗೆಹಾರ





0 Comments