ಸಕಲೇಶಪುರದ ಹೇಮಾವತಿ ನದಿಯಲ್ಲಿ ಈಜಲು ಹೋದ ಮೂಡಿಗೆರೆ ಜನ್ನಾಪುರ ಗ್ರಾಮದ, ಸುಮಾರು 24 ವರ್ಷ ವಯಸ್ಸಿನ ಪುನೀತ್ ಎಂಬ ಯುವಕನೋರ್ವ ಮೃತಪಟ್ಟಿದ್ದಾನೆ.

ಮೂಡಿಗೆರೆಯ ಜನ್ನಾಪುರದ ಪುನೀತ್ ಸಕಲೇಶಪುರ ತಾಲೂಕಿನ   ಅಗ್ರಹಾರ ಬಡಾವಣೆಯಲ್ಲಿರುವ ತನ್ನ ಸ್ನೇಹಿತನ ಮನೆಗೆ ಬಂದಿದ್ದ.

ಹತ್ತಿರದಲ್ಲಿದ್ದ ಹೇಮಾವತಿ ನದಿಗೆ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಸಧ್ಯ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರ ನೆರವಿನಿಂದ ಯುವಕನ ಶವವನ್ನು ನೀರಿನಿಂದ ಹೊರತೆಗೆಯಲಾಗಿದೆ.