ಇಂದು ಮಧ್ಯಾಹ್ನ ಶೃಂಗೇರಿಯಿಂದ ಕೊಪ್ಪ ಹೋಗುವ ಮಾರ್ಗದಲ್ಲಿ ಲಾರಿಯೊಂದು ಹಸುವಿಗೆ ಗುದ್ದಿ ಹಸುವಿಗೆ ಗಂಭೀರವಾಗಿ ಪೆಟ್ಟಾಗಿತ್ತು, ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದ ಹಸುವನ್ನು ಲೆಕ್ಕಿಸದೇ ಲಾರಿ ಚಾಲಕ ಹೋಗಿರುವ ಅಮಾನವೀಯ ಘಟನೆ ನಡೆದಿದ್ದು. ಅದೇ ಸಮಯದಲ್ಲಿ ಅಲ್ಲಿಯೇ ಇದ್ದ  ಹೊಸಕೊಪ್ಪ ಡಾ.ಲಕ್ಷ್ಮೀನಾರಯಣ, ಮಂಜುನಾಥ ಕಾವಡಿಯವರುಗಳು ಗಾಯಗೊಂಡ ಹಸುವನ್ನು ಪಕ್ಕಕ್ಕೆ ಎತ್ತಿ ಆರೈಕೆ ಮಾಡಿರುತ್ತಾರೆ, ಈ ಸಮಯ ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಹಂಚಲಿ ರಾಘವೇಂದ್ರ, ಶ್ರೇಯಸ್ ಕವಿಲುಕೊಡಿಗೆ, ಶರತ್ ನಿಲುವಾಗಿಲು ರವರುಗಳು ಸಹಾಯಕ್ಕೆ ಬಂದಿದ್ದಾರೆ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಶಿಲ್ಪ ರವಿ ಹಾಗೂ ಶೃಂಗೇರಿ ಶಿವಣ್ಣ ಅವರ ಸಹಕಾರದ ಮೂಲಕ ಪಶುವೈದ್ಯರು ಬೇಗಾರಿನಿಂದ ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿ ಚಿಕಿತ್ಸೆ ನೀಡಿದರು. ನಂತರ ರಾಘವೇಂದ್ರ ಹಂಚಲಿ ಅವರು ಹಸುವಿನ ಮಾಲೀಕರಿಗೆ ಮಾಹಿತಿ ತಿಳಿಸಿ, ಅವರ ಮನೆಗೆ ಕಳುಹಿಸಿಕೊಟ್ಟರು

ಈ ಸಂದರ್ಭ ಉದಯ್ ಆನೆಗುಂದ, ಕಾವಡಿ ಗಿರೀಶ್,ಅಸಗೋಡು ರಾಘವೇಂದ್ರ, ಉಳುವೆ ವಿಘ್ನೇಶ್, ಕಡೆಮನೆ ಗೌತಮ್, ದಿಲೀಪ್ ರಾವ್ ಇದ್ದು ಹಸುವಿನ ಚಿಕಿತ್ಸೆ ಹಾಗೂ ಮನೆಗೆ ತಲುಪಿಸುವಲ್ಲಿ ಸಹಾಯ ಮಾಡಿ ಮಾನವೀಯತೆ ಮೆರೆದರು.