ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿ ಖಾನೆಗಳ ಮೇಲೆ ಜಂಟಿಯಾಗಿ ದಾಳಿ ನಡೆಸಿದ ಪೊಲೀಸರು ಹಾಗೂ ನಗರ ಸಭೆಯ ಅಧಿಕಾರಿಗಳು ಇಂದು ಸಾವಿರಾರು ಕೆಜಿ ಗೋಮಾಂಸವನ್ನು ಜಪ್ತಿ ಮಾಡಿದ್ದಾರೆ. ಅಕ್ರಮವಾಗಿ ಹಲವಾರು ಸಮಯದಿಂದ ಈ ಅಕ್ರಮ ನಡೆಯುತ್ತಿತ್ತು, ಇಂದು ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಜರಂಗದಳ ಗೋಹತ್ಯೆ ತಡೆಯಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.ರಾಜ್ಯದಲ್ಲಿ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ 2002 ಕಾಯ್ದೆ ಜಾರಿಯಲ್ಲಿದ್ದು, ಈ ಕಾನೂನು ಜಾರಿಯಲ್ಲಿದ್ದರೂ ಅಕ್ರಮವಾಗಿ ಹಸುಗಳನ್ನು  ಕೊಲ್ಲುವ ಕೆಲಸ ನಡೆಯುತ್ತಲೇ ಇದೆ. ಆದಷ್ಟು ಬೇಗ ಪೋಲಿಸ್ ಇಲಾಖೆ ಗೋ ಹಂತಕರ ಮೇಲೆ ಕ್ರಮ ಜರುಗಿಸಬೇಕು, ಹಾಗೂ ಕಾನೂನಿನ ಅಡಿಯಲ್ಲಿ ಬರುವ ಎಲ್ಲಾ ಕಠಿಣ ಶಿಕ್ಷೆಗಳನ್ನು ಕಸಾಯಿ ಖಾನೆ ನಡೆಸುತ್ತಿರುವ ಅಪರಾಧಿಗಳ ಮೇಲೆ ಜರುಗಿಸಿ ಕ್ರಮ ಕೈಗೊಳ್ಳಬೇಕು.

ಬಕ್ರೀದ್ ಹಿನ್ನೆಲೆಯಲ್ಲಿ ಅಕ್ರಮ ಗೋಸಾಗಾಟ ಮಿತಿಮೀರಿದೆ, ಈ ಕೂಡಲೇ ಎಲ್ಲೆಡೆ ಚೆಕ್ ಪೋಸ್ಟ್ ನಿರ್ಮಿಸುವ ಮೂಲಕ ಈ ಕೃತ್ಯಗಳನ್ನು ನಿಗ್ರಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ನಗರ ಸಂಚಾಲಕ ಶ್ಯಾಮ್ ವಿ ಗೌಡ ಅವರು ಆಗ್ರಹಿಸಿದ್ದಾರೆ.

ಕಠಿಣ ಕ್ರಮಕ್ಕೆ ಬಿಜೆಪಿ ಯುವಮೋರ್ಚಾ ಒತ್ತಾಯ.

ಹೊಸ ಗೋ ಮಸೂದೆ ಕಾಯ್ದೆಯಡಿರಲ್ಲಿ ಕಠಿಣ ಕ್ರಮ ಕೈಗೊಂಡು ಆರೋಪಿಗಳನ್ನು ಗಡೀಪಾರು ಮಾಡಬೇಕು ಎಂದು ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಸಂದರ್ಭ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಹಾಗೂ ಜೀವನ್, ಕೌಶಿಕ್, ಕಾಂಚನ್,ಪ್ರಶಾಂತ್, ಗೌತಮ್ ಇದ್ದರು