ಕಳಸ ಸಮೀಪದ ಜಾಂಬಳೆ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಹೊಸದೇನಲ್ಲ ಆದರೆ ಸತತ ನಾಲ್ಕು ವರ್ಷಗಳ ಪರಿಶ್ರಮಕ್ಕೆ ಈಗ ಜಯ ದೊರೆತಿದೆ.  

ಅರಣ್ಯ ಇಲಾಖೆಯ ಹಲವು ನಿಯಮಾವಳಿಗಳಿಂದ ಇಷ್ಟು ವರ್ಷಗಳ ಕಾಲ ಟವರ್ ಕೆಲಸ ಸಾಧ್ಯವಾಗಿರಲಿಲ್ಲ, ಈ ಕುರಿತು  ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಮಧ್ಯೆ ಹಲವಾರು ಬಾರಿ ವಾಗ್ವಾದ ನಡೆದಿತ್ತು,  ಇಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇದ್ದರೂ ಅದರ ಉಪಯೋಗ ಯಾರಿಗೂ ಲಭಿಸುವುದಿಲ್ಲ,  ಆನ್ಲೈನ್ ಕ್ಲಾಸ್ಗಳು ಆರಂಭವಾದ ನಂತರದ ದಿನಗಳಲ್ಲಿ ಸ್ಥಳೀಯರು, ಹಾಗೂ ಜನಪ್ರತಿನಿಧಿಗಳ ನಿರಂತರ ಒತ್ತಡದ ಮೇರೆಗೆ ಹಾಗೂ ಸ್ಥಳೀಯರು ಚಿಕ್ಕಮಗಳೂರಿನ  ಜಿಯೋ ಸಂಸ್ಥೆಗೂ ಕೂಡ ಹೋಗಿ ಅಲ್ಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು, ಇದಿಷ್ಟೂ ಘಟನೆಗಳ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ  ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳ ಮನವೊಲಿದು ಹಲವು ನಿಯಮಗಳನ್ನು ಸಡಿಲಗೊಳಿಸಿ  ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ  ತಿಳಿಸಿದ್ದಾರೆ. 

ಸಂತಸದ ಸಂಭ್ರಮಾಚರಣೆ:
4 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ  ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಸಹಕರಿಸಿದ ಕಾರ್ಕಳ ವನ್ಯ ಜೀವಿ ಅಧಿಕಾರಿಗಳು, ಕುದುರೆಮುಖ ಅರಣ್ಯಧಿಕಾರಿಗಳು ಮತ್ತು ಜಿಯೋ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳಾದ ಶಂಕರೇ ಗೌಡ್ರು, ಉದಯ ಬೀಳಗಲ್, ಕಾಮಕ್ಷಿ ಮಂಜುನಾಥ್, ತೇಜಸ್ ಜೈನ್, ರಾoಪ್ರಕಾಶ್ ಭಟ್, ಸುರೇಶ್  ಇವರುಗಳು ಕಾರ್ಕಳ ವನ್ಯ ಜೀವಿ ಕಚೇರಿಯಲ್ಲಿ ಸಾಮೂಹಿಕವಾಗಿ ಅಭಿನಂದನೆಯನ್ನು ಸಲ್ಲಿಸಿದರು.