ಮಲೆನಾಡಿನ ಭಾಗದಲ್ಲಿ ದಿನೇದಿನೇ ಗೋಮಾಂಸ ಹಾಗೂ ಅಕ್ರಮವಾಗಿ ಗೋವುಗಳ ಕಳ್ಳಸಾಗಣೆ ವಿಪರೀತವಾಗಿ ನಡೆಯುತ್ತಲೇ ಇದೆ. ಕೇವಲ ಎರಡು ದಿನಗಳ ಹಿಂದಷ್ಟೇ ಚಾರ್ಮಾಡಿ ಘಾಟಿಯಲ್ಲಿ ಅಕ್ರಮವಾಗಿ ಕೋಣಗಳನ್ನು ಸಾಗಿಸುತ್ತಿದ್ದ ಹಿನ್ನೆಲೆ ಆರೋಪಿಗಳನ್ನು ಬಂಧಿಸಿದ್ದರು. ಇಂದು ಕೊಪ್ಪ ತಾಲೂಕಿನ ಜಯಪುರ ಸಮೀಪದ ಕೊಗ್ರೆಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಿರುವ ಘಟನೆಯೊಂದು ನಡೆದಿದೆ.
ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಸುಮಾರು ಮೂರು ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ದನದ ಮಾಂಸವನ್ನು ಅಕ್ರಮವಾಗಿ ಬೈಕ್ ನಲ್ಲಿ ಸಾಗಣೆ ಮಾಡಲಾಗುತ್ತಿತ್ತು, ಈ ಸಮಯದಲ್ಲಿ ಎಚ್ಚೆತ್ತ ಸ್ಥಳೀಯ ಭಜರಂಗದಳದ ಕಾರ್ಯಕರ್ತರು ಎನ್ನಲಾದ ಕೆಲ ಯುವಕರು ಬೈಕ್ ಸವಾರನನ್ನು ಹಿಡಿಯುವ ಸಲುವಾಗಿ ಅವನು ಬರುತ್ತಿದ್ದ ಜಾಗಕ್ಕೆ ತೆರಳಿದ್ದರು, ಮಾರ್ಗಮಧ್ಯದಲ್ಲಿ ಭಜರಂಗದಳದ ಕಾರ್ಯಕರ್ತರು ಬರುವುದನ್ನು ಅರಿತ ಗೋಮಾಂಸ ಸಾಗಾಟಗಾರ ಬೈಕನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಗ್ರಾಮಸ್ಥರು ಹಾಗೂ ಬಜರಂಗದಳದ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದು ಈ ರೀತಿಯ ಘಟನೆ ಹೊಸತೇನಲ್ಲ ಹಲವಾರು ಬಾರಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ
ರಾಜ್ಯಾದ್ಯಂತ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಆರೋಪಿಗಳ ವಿರುದ್ಧ ಹಲವು ಪ್ರಕರಣದಲ್ಲಿ ಯಾವುದೇ ರೀತ್ಯಾ ಕಠೀಣ ಶಿಕ್ಷೆ ನೀಡಿರುವುದು ಇದುವರೆಗೂ ಕಂಡುಬಂದಿಲ್ಲ. ಇದರ ಹಿಂದಿರುವ ಕೈಗಳನ್ನು ಆದಷ್ಟು ಬೇಗ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಅನುಮಾನ ವಿರುವ ನಾಲ್ಕು ಜನರ ಮೇಲೆ ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ, ಈ ಕೃತ್ಯಕ್ಕೆ ಬಳಸಿದ ಒಂದು ಹೀರೋಹೊಂಡ ಸ್ಪ್ಲೆಂಡರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಅಪರಾಧಿಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದಾರೆ.



0 Comments