ಮಲೆನಾಡಿನಲ್ಲಿ ಮಳೆಯ ಆರಂಭವಾಗಿದ್ದು ಮಳೆಯ ಜೊತೆಗೆ ಕಾಡು ಪ್ರಾಣಿಗಳೂ ನಾಡಿಗೆ ಬರಲು ಆರಂಭ ಮಾಡಿದೆ. ಇತ್ತೀಚೆಗಷ್ಟೆ ಮಲೆನಾಡಿನಲ್ಲಿ ಕರಡಿ, ಚಿರತೆ, ಸೇರಿದಂತೆ ಹಲವು ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ದಾಳಿ ನಡೆಸಿದ ಘಟನೆಗಳೂ ನಡೆದಿದೆ. ಇದೇ ರೀತಿಯಾಗಿ ಇಂದು ಮುಂಜಾನೆ ಆನೆಯೊಂದು ಪಟ್ಟಣಕ್ಕೆ ಬಂದು ಜನರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಮಗಳೂರಿನ ವಸ್ತಾರೆ ಗ್ರಾಮದಿಂದ ಈ ಆನೆ ಸಂಚಾರ ಆರಂಭ ಮಾಡಿದ್ದು ಅರ್ಧ ಪಟ್ಟಣ ಸಂಚಾರ ಮಾಡಿದೆ, ಇದಲ್ಲದೇ ಚಿಕ್ಕಮಗಳೂರು ನಗರದ ಎಬಿಸಿ ಕಾಫಿ ಕ್ಯೂರಿಂಗ್ ನಲ್ಲಿ ಸಹ ಆನೆ ಪ್ರತ್ಯಕ್ಷವಾಗಿದ್ದು ಪಟ್ಟಣದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸನಿಹದ ಬಿದಿರು ಕಾಡಿಗೆ ಗಜರಾಜನನ್ನು ಅಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟರು, ಅರಣ್ಯದ ಆನೆಯನ್ನು ನೋಡಲು ಜನರು ಎಲ್ಲೆಡೆ ಇಂದ ಬರುತ್ತಿದ್ದಾರೆ. ಜನರನ್ನು ನಿಯಂತ್ರಣ ಮಾಡುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವರು ಆನೆಯ ಫೋಟೋ ವಿಡಿಯೋ ಗಳನ್ನು ಸೆರೆ ಹಿಡಿಯಲು ಮುಂದೆ ಬರುತ್ತಿದ್ದರು, ಇದರಿಂದ ಆನೆಯೂ ಹೆದರಿಕೆಯಿಂದ ಅತ್ತಿಂದಿತ್ತ ಓಡಾಡುತಿತ್ತು.
ಅರಣ್ಯ ನಾಶ ಹಾಗೂ ಕಾಡಾನೆಗಳು ಆಹಾರದ ಕೊರತೆಯಿಂದ, ಕಾಡಿನಲ್ಲಿ ಆಹಾರ ಲಭ್ಯವಾಗದೇ ಆಹಾರವನ್ನರಸಿ ನಗರಕ್ಕೆ ಬಂದಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.




0 Comments