ಶಾಲೆಗೆ ಹೋಗದೆ ಹೊರಗುಳಿದ ಮಕ್ಕಳನ್ನು ಗುರುತಿಸುವ ಸಲುವಾಗಿ, ಆಯಾಯ ಗ್ರಾಮಗಳಿಂದ ಗ್ರಾಮ ಪಂಚಾಯತ್ ನ ವಲಯದಲ್ಲಿ ಪ್ರತೀ ಮನೆಯ ಸಮೀಕ್ಷೆಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 1034 ಮಕ್ಕಳು ಇದ್ದು, ಹೆಚ್ಚಿನದಾಗಿ ಚಿಕ್ಕಮಗಳೂರು ತಾಲೂಕಿನಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ.



 1034 ಮಕ್ಕಳ ಸಾಲಿನಲ್ಲಿ , ಶಾಲೆ ಬಿಟ್ಟವರು 892, ಹಾಗೂ ಶಾಲೆಗೆ ಇನ್ನೂ ದಾಖಲಾಗದೆ ಇರುವಂತಹ ಮಕ್ಕಳು 142 ಜನರಿದ್ದಾರೆ. ಪ್ರತೀ ಬ್ಲಾಕ್ ವಾರು ಶಾಲೆ ಬಿಟ್ಟ ಮಕ್ಕಳ ಅಂಕಿ ಅಂಶ ಹೀಗಿದೆ.

  • ಚಿಕ್ಕಮಗಳೂರು- 452 
  • ಶೃಂಗೇರಿ -19
  • ತರೀಕೆರೆ - 197
  • ಕೊಪ್ಪ - 104
  • ಎನ್.ಆರ್ ಪುರ-56
  • ಮೂಡಿಗೆರೆ -86
  • ಬೀರೂರು -63
  • ಕಡೂರು -57

        ಒಟ್ಟು  1034

ಹಲವಾರು ಮಕ್ಕಳು ಶಾಲೆ ಬಿಡಲು ಕೊರೋನಾವೇ ಕಾರಣ ಎಂದು ತಿಳಿದು ಬಂದಿದೆ.

ಕೊರೋನಾ ಲಾಕ್ಡೌನ್ ಸಮಯದಲ್ಲಿ ಊಟಕ್ಕೇ ಇರಲಿಲ್ಲ ಇನ್ನು ಮಕ್ಕಳ ವಿದ್ಯಾಭ್ಯಾಸ ಎಲ್ಲಿಂದ  ಮಾಡಿಸುವುದು ಎಂದು ಹಲವು ಮಕ್ಕಳ ಪೋಷಕರು ಸಮೀಕ್ಷೆಯ ವೇಳೆ ತಿಳಿಸಿದ್ದರೆ, 

ಇನ್ನು ಕೆಲ ಮಕ್ಕಳು ಸ್ವತಃ ಅವರೇ ಹಣಕ್ಕಾಗಿ ದುಡಿಮೆಯನ್ನು ಮಾಡುತ್ತಿದ್ದಾರೆ ಎಂಬುದು ಸಮೀಕ್ಷೆಯ ವರದಿ. 

ಪ್ರತಿ ಪಂಚಾಯ್ತಿ ವತಿಯಿಂದ ನಡೆಸಿದ ಸಮೀಕ್ಷೆಯಿಂದ ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು ಸರ್ಕಾರದ ಸ್ಟೂಡೆಂಟ್ ಸರ್ವೇ ಅಪ್ಲಿಕೇಶನ್ ಗೆ ಅಪ್ಲೋಡ್ ಮಾಡಲಾಗಿದೆ.