ನಾನು ಬಿಜೆಪಿ ಕಾರ್ಯಕರ್ತನೇ ಹೊರತು ಮಾಲೀಕನಲ್ಲ, ಪಕ್ಷದಲ್ಲಿ ಯಾರಾದರೂ ಮಾಲೀಕತ್ವ ವಹಿಸಿಕೊಳ್ಳುವ ಸಂದರ್ಭ ಬಂದರೆ ಶಾಸಕ ಎಂಪಿ ಕುಮಾರಸ್ವಾಮಿ ಅವರೇ ವಹಿಸಿಕೊಳ್ಳಲಿ, ಅವರಿಗೆ ಮಾಲೀಕತ್ವದ ಸ್ಥಾನ ಕೊಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮೂಡಿಗೆರೆಯ ಶಾಸಕ ಎಂ. ಪಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.


ಸಿ.ಟಿ ರವಿ ಪ್ರಭಾವದಿಂದ ವರ್ಗಾವಣೆ ಹಾಗೂ ಇನ್ನಿತರ ಕೆಲಸಗಳು ನಡೆಯುತ್ತಿದೆ ಎಂಬ ಎಂ.ಪಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿ.ಟಿ ರವಿ ಅವರು, ನನ್ನ ನಾಯಕತ್ವದಲ್ಲಿ ಕೇವಲ ಜನ ಹಿತದ ಕಾರ್ಯಗಳು ನಡೆಯುತ್ತಿದೆ ಹಾಗೂ ಮುಂದೆಯೂ ನಡೆಯುತ್ತದೆ, ಶಿಫಾರಸು ಪತ್ರವನ್ನು  ನನ್ನಂತೆಯೇ ಎಂಪಿ ಕುಮಾರಸ್ವಾಮಿ ಅವರೂ ನೀಡುತ್ತಾರೆ, ಅದರಲ್ಲಿ ವೆತ್ಯಾಸಗಳೇನು ಇಲ್ಲ.ಎಂ.ಪಿ ಕುಮಾರಸ್ವಾಮಿ ಅವರೇ ನಮ್ಮ ಮಾಲೀಕರು ಎಂದು ಟಾಂಗ್ ಕೊಟ್ಟಿದ್ದಾರೆ.

ನೀವು ಯಾರನ್ನೇ ವರ್ಗಾವಣೆ ಮಾಡಿಸಿಕೊಂಡು ಜಿಲ್ಲೆಗೆ ತಂದರೂ ಸಂತೋಷ. ನಾನು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಮಾತ್ರ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ ಹೊರತು ನನ್ನ ವೈಯಕ್ತಿಕ ಕೆಲಸದ ಕುರಿತಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ಯಾವ ಅಧಿಕಾರಿಗಳು ಜಿಲ್ಲೆಗೆ ಬಂದರೂ ನಮ್ಮ ಸ್ವಾಗತವಿದೆ ಎಂದು ಎಂ.ಪಿ ಕುಮಾರಸ್ವಾಮಿ ಅವರ ಆಪಾದನೆಗೆ ಸಿ.ಟಿ ರವಿ ಉತ್ತರಿಸಿದ್ದಾರೆ.