ಪಿಕಪ್ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಆರು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ನಡೆದಿದೆ.
ಈ ಘಟನೆಯು ಬಾಳೂರು ಹೋಬಳಿಯ ಮಹಾಮನೆ ಕಾಫಿ ತೋಟದಲ್ಲಿ ನಡೆದಿದ್ದು.ಈ ಅವಘಡದಲ್ಲಿ ಕೊಟ್ಟಿಗೆಹಾರದ ನಿವಾಸಿಗಳಾದ ಸುಶೀಲ, ಜಯ, ಮಾಲಿನಿ, ಕಲಾವತಿ, ಪುಟ್ಟಮ್ಮ ಮತ್ತು ಸುಶೀಲ ಎಂಬುವವರು ಗಾಯಗೊಂಡಿದ್ದಾರೆ. ಎಲ್ಲರಿಗೂ ಬಣಕಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಳಗಾದ ಮೂವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಉಳಿದ ಮೂವರು ಬಣಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
- ವರದಿ ತನು ಕೊಟ್ಟಿಗೆಹಾರ



0 Comments