ಕರ್ನಾಟಕ ಲೋಕಾಯುಕ್ತ ಕಚೇರಿ ಬಳಿ ಇರುವ ಬಸ್ ತಂಗುದಾಣದಲ್ಲಿ ಒರ್ವ ಮಹಿಳೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ದಾರುಣ ಘಟನೆ ಶಿವಮೊಗ್ಗದ ದೊಡ್ಡ ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಲತಾ(45) ಎಂದು ಗುರುತಿಸಲಾಗಿದ್ದು, ಈಕೆ ನಿರ್ಗತಿಕಳಾಗಿದ್ದು, ಎನ್. ಟಿ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿ ಬಳಿಯ ಬಸ್ ನಿಲ್ದಾಣದ ಬಳಿ ವಾಸವಿದ್ದಳು.
ಮೃತ ಮಹಿಳೆ ಗಾಜನೂರು ಬಳಿಯ ಲಕ್ಚ್ಮೀಪುರ ತಾಂಡದವಳಾಗಿದ್ದು. ಮಂಡೇನಕೊಪ್ಪದ ಹನುಮಂತಪ್ಪ ಎಂಬಾತನೊಂದಿಗೆ ಮದುವೆಯಾಗಿತ್ತು, ಆದರೆ ಕೆಲವು ದಿನ ಮಾತ್ರವೇ ಈತನೊಂದಿಗೆ ಸಂಸಾರ ನಡೆಸಿದ ಲತಾ ಅನೇಕ ವರ್ಷಗಳಿಂದ ಆತನಿಂದ ದೂರವಿದ್ದಳು.
ಈ ಹತ್ಯೆಗೆ ನಿಖರ ಕಾರಣಗಳು ಇನ್ನೂ ಏನೆಂದು ತಿಳಿದು ಬಂದಿಲ್ಲ, ಲತಾ ಮಲಗಿದ್ದಾಗ ಅವರ ತಲೆಯ ಮೇಲೆ ಸಿಮೆಂಟ್ ನ ಸ್ಲಾಬ್ ಎತ್ತಿ ಹಾಕಿ ದಾರುಣವಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಈ ಕುರಿತಾಗಿ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಹಾಗೂ ಪ್ರಕರಣದ ತನಿಖೆ ಶೀಘ್ರವಾಗಿ ಆರಂಭವಾಗುತ್ತದೆ, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.



0 Comments