ಇಂದು  ಬ್ಲೂ ಯೆಂಡರ್ ಕಂಪನಿಯ ವತಿಯಿಂದ, ಸಮರ್ಪಣಾ ಟ್ರಸ್ಟ್ ಮುಖಾಂತರ, ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ 03 ಆಕ್ಸಿಜನ್ ಕಾನ್ಸಂಟ್ರೇಟರ್ ಹಸ್ತಾಂತರ ಮಾಡಲಾಯಿತು. 

ಶೃಂಗೇರಿ ಶ್ರೀ ಮಠದ  ಕೃಷ್ಣಮೂರ್ತಿರವರು ತಾಲೂಕು ಆಸ್ಪತ್ರೆಯ ಡಾ. ದಯಾನಂದ್ ಅವರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಹಸ್ತಾಂತರ ಮಾಡಿದರು. ಉತ್ತಮ ಗುಣಮಟ್ಟದ ಹೊಸ ದರ್ಜೆಯ  ಕಾನ್ಸಂಟ್ರೇಟರ್ ಗಳನ್ನ ಹಸ್ತಾಂತರ ಮಾಡಿದ ಕೃಷ್ಣಮೂರ್ತಿ ಅವರು ಈ ಆಕ್ಸಿಜನ್ ಕಾನ್ಸಂಟ್ರೇಟರ್  ಅನಿವಾರ್ಯತೆ ಈಗ ಎದುರಾಗಿದೆ, ಮುಂದಿನ ದಿನಗಳಲ್ಲಿ ಇದರ ಬಳಕೆ ಸಮರ್ಪಕವಾಗಿ ಆಗಲಿ ಎಂದರು ಮತ್ತು ಕೊಡುಗೆ ನೀಡಿದ ಬ್ಲೂ ಯೆಂಡರ್ ಕಂಪನಿ ಹಾಗೂ ಸಮರ್ಪಣಾ ಟ್ರಸ್ಟ್  ಗೆ ಅಭಿನಂದಿಸಿದರು. ತಾಯಿ ಶಾರದೆಯ ವಿಗ್ರಹವನ್ನು  ಅನುಗ್ರಹ ರೂಪದಲ್ಲಿ ನೀಡಿದರು.


ಒಟ್ಟು 12 ಲಕ್ಷಕ್ಕೂ ಅಧಿಕ ಮೊತ್ತದ 18 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಬ್ಲೂ ಯೆಂಡರ್ ಕಂಪನಿಯ ನೆರವಿನೊಂದಿಗೆ ಬೇರೆ ಆಸ್ಪತ್ರೆಗಳಿಗೆ ನೀಡಲಾಗಿದೆ. ಲಾಕ್ ಡೌನ್ ನ ಸಂಕಷ್ಟ ಸ್ಥಿತಿಯಲ್ಲಿ ಹಲವಾರು ಜನರ ಹಸಿವನ್ನು ನೀಗಿಸುವ ಕೆಲಸವನ್ನು ಟ್ರಸ್ಟ್ ಮಾಡಿದೆ, ಹಾಗೂ ಮುಂದಿನ ದಿನಗಳಲ್ಲಿ ಸಮಾಜದೊಂದಿಗೆ ಸದಾ ಕಾಲ ಸಮರ್ಪಣಾ ಟ್ರಸ್ಟ್ ಇರಲಿದೆ ಎಂದು ಟ್ರಸ್ಟ್ ನ ಸದಸ್ಯ ಆದರ್ಶ್ ತಿಳಿಸಿದರು.

ಈ ಸಂದರ್ಭದಲ್ಲಿ ಶೃಂಗೇರಿ ಶ್ರೀ ಮಠದ ಕೃಷ್ಣಮೂರ್ತಿ ಅವರು ಹಾಗೂ ಸಮರ್ಪಣಾ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.