ಅಂಬಳಿಕೆಯ ಹುಲಿಗುಡ್ಡ ಕುಸಿತಕ್ಕೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ.ತೀರ್ಥಹಳ್ಳಿ ತಾಲ್ಲೂಕಿನ ನೆರಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಬ್ಬಿ ಗ್ರಾಮ ಸಮೀಪದ ಅಂಬಳಿಕೆಯಲ್ಲಿದ್ದ ಹುಲಿಗುಡ್ಡ ಕುಸಿದು, ಗುರುಮೂರ್ತಿ ಎಂಬ ರೈತರಿಗೆ ಸೇರಿದ ಸುಮಾರು ಒಂದೂವರೆ ಎಕರೆ ಫಸಲು ಭರಿತ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ.ಇದರಿಂದಾಗಿ ಗುರುಮೂರ್ತಿ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ.
ಸ್ಥಳೀಯ ಶಾಸಕರಾದ ಆರಗ ಜ್ಞಾನೇಂದ್ರ ಅವರು ಸರಕಾರದ ವತಿಯಿಂದ ಗುರುಮೂರ್ತಿಗಳಿಗಾದ ನಷ್ಟಕ್ಕೆ ತಕ್ಷಣವೇ ಸೂಕ್ತ ಪರಿಹಾರ ದೊರಕಿಸಬೇಕೆಂದು ಗ್ರಾಮಸ್ಥರು ಕೇಳಿಕೊಂಡಿದ್ದಾರೆ.
ಕಳೆದ ವರ್ಷ ಮಲೆನಾಡು ಇಂತಹದೇ ಘಟನೆಗಳಿಂದ ಹಲವು ಅನಾಹುತಕ್ಕೆ ಕಾರಣವಾಗಿತ್ತು, ಈ ವರ್ಷ ಸಹ ಇಂತಹ ಬೆಳವಣಿಗೆಗಳು ರೈತ ಸಮುದಾಯವನ್ನು ಆತಂಕಕ್ಕೆ ದೂಡಿದೆ
ಮಾಹಿತಿ: ವಿಶ್ವಾಸ್ ಜಿಗಳಗೋಡು





0 Comments