ಜೀವನವೇ ಮುಗಿಯಿತು ಎಂದು ಜಿಗುಪ್ಸೆ ಹೊಂದಿ,ಹಾಸನದಲ್ಲಿ ರೈಲಿಗೆ ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ, ಮನಕಲುಕುವ ಘಟನೆ ಹಾಸನದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಪ್ರಮೋದ್ ಎಂದು ಗುರುತಿಸಲಾಗಿದೆ. ಇಪ್ಪತ್ಮೂರು ವರ್ಷದ ಈತ ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿಯ ವನು ಎಂದು ತಿಳಿದು ಬಂದಿದೆ.

ಪ್ರಸ್ತುತ ಬೆಂಗಳೂರಿನ ಕಿರ್ಲೋಸ್ಕರ್ ಕಂಪನಿಯಲ್ಲಿ ನೌಕರಾನಾಗಿದ್ದ ಪ್ರಮೋದ್, ಎಲ್ಲರೊಂದಿಗೆ ಸಹಜವಾಗಿ ಇರುತ್ತಿದ್ದ. ಎರಡು ದಿನಗಳ ಹಿಂದಷ್ಟೇ ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ತನ್ನ ಸಂಬಂಧಿಕರಲ್ಲಿ ತಿಳಿಸಿ ಹೊರಟಿದ್ದ ಪ್ರಮೋದ್, ಜೀವನದಿಂದ ಬೇಸತ್ತು  ಹಾಸನದ ಜ್ಞಾನಕ್ಷಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ರೈಲು ಹಳಿಗಳ ಮೇಲೆ ತನ್ನ ತಲೆಯನ್ನು ಇರಿಸಿಕೊಂಡು ಭಯಾನಕವಾಗಿ ಸಾವನ್ನಪ್ಪಿದ್ದಾನೆ. ರುಂಡ ಮುಂಡ ಗಳು ಬೇರ್ಪಟ್ಟಿವೆ. 

ಮೃತದೇಹವನ್ನು  ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.