ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಹಲವಾರು ಸಮಸ್ಯೆಗಳು ತಲೆ ದೋರಿದೆ.  ಕಳಸದ ಸುತ್ತ ಮುತ್ತಲಿನಪರಿಸರದಲ್ಲಿ ಸುರಿಯುತ್ತಿರುವ ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದೆ,  ಪ್ರಾಣಿಗಳು ಸಹ ಆಶ್ರಯಕ್ಕಾಗಿ ಸೂರು ಅರಸಿ ಬರುತ್ತಿವೆ.

ಕಳಸ ತಾಲೂಕಿನ ಆಶೀರ್ವಾದ ರೆಸ್ಟೋರೆಂಟ್ ಗೆ ಜಿಂಕೆಯೊಂದು ಮಳೆಯ ಆರ್ಭಟ ತಾಳಲಾರದೆ ಬಂದಿದೆ. ಮಳೆಯ ಹೊಡೆತಕ್ಕೆ ನಲುಗಿದ್ದ ಜಿಂಕೆಯನ್ನು ರೆಸ್ಟೋರೆಂಟ್ ನ ಮಾಲೀಕರಾದ ರವಿ ರೈ ಅವರು ಚೇತರಿಸಿಕೊಳ್ಳಲು ಬಿಟ್ಟು ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಜಿಂಕೆಗೆ ಪ್ರಾಥಮಿಕ ತಪಾಸಣೆ ನಡೆಸಿ ಕೂಡಲೇ ಅರಣ್ಯಕ್ಕೆ ಬಿಟ್ಟಿದ್ದಾರೆ.

visit:www.kavyaherbaloil.com

ಮಲೆನಾಡಿನಲ್ಲಿ ಉಂಟಾಗುತ್ತಿರುವ ನಿರಂತರ  ಮಳೆಗೆ  ಹಲವಾರು ಸಮಸ್ಯೆಗಳು ಉಂಟಾಗಿದೆ. ಪ್ರಾಣಿಗಳು ಆಶ್ರಯಕ್ಕಾಗಿ ಜನರನ್ನರಸಿ ಬರುತ್ತಿರುವುದು ಕಂಡುಬರುತ್ತಿದೆ.


ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ https://forms.gle/hJoKNWwWAXZRZiZF6