ಇಂದು ಮದ್ಯಾಹ್ನ ಸರಿಸುಮಾರು 12.30ರ ಸಮಯದಲ್ಲಿ ಶೃಂಗೇರಿ ತಾಲೂಕಿನ ತಾರೊಳ್ಳಿಕೊಡಿಗೆಯಲ್ಲಿ ಮನೆಯ ಹತ್ತಿರ ಕೆಲಸ ಮಾಡುತ್ತಿದ್ದ ಗಂಡ ಹೆಂಡತಿ ಮೇಲೆ ಕರಡಿ ದಾಳಿ ನಡೆಸಿದ್ದು ತೀವ್ರ ತರಹದ ಗಾಯಗಳಾಗಿವೆ.
ದಾಳಿಗೊಳಗಾದವರು ಚಂದ್ರಶೇಖರ್(50) ಹಾಗೂ ಅವರ ಪತ್ನಿ ಜಯಲಕ್ಷ್ಮೀ(39) ಎಂದು ತಿಳಿದುಬಂದಿದ್ದು ಮನೆಯ ಹತ್ತಿರ ಸೊಪ್ಪು ಕಡಿಯುವಾಗ ಏಕಾಏಕಿ ಕರಡಿ ದಾಳಿ ನಡೆಸಿದೆ.
ಸಧ್ಯ ಗಾಯಗೊಳಗಾದ ಇಬ್ಬರನ್ನು ಶೃಂಗೇರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಈ ಕುರಿತು ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿದ ಶೃಂಗೇರಿ ವಲಯ ಅರಣ್ಯಾಧಿಕಾರಿ ಸಂಪತ್ ಕುಮಾರ್ ಅವರು ಇತ್ತೀಚಿನ ಕೆಲವು ವರ್ಷಗಳಲ್ಲಿ ಶೃಂಗೇರಿಯಲ್ಲಿ ಕರಡಿ ದಾಳಿ ಪ್ರಕರಣ ಇದೇ ಮೊದಲಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಕರಡಿಯು ತನ್ನ ಮರಿಯೊಂದಿಗೆ ಇದ್ದುದರಿಂದ ದಾಳಿ ಮಾಡಿರುವ ಸಾಧ್ಯತೆಯಿದೆ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.



0 Comments