ಚಿಕ್ಕಮಗಳೂರಿನಲ್ಲಿ ರಾತ್ರಿವೇಳೆ ಸಂಚಾರ ಮಾಡುವ ವಾಹನಗಳನ್ನು ನಿರ್ಜನ ಪ್ರದೇಶದಲ್ಲಿ  ಅಡ್ಡಗಟ್ಟಿ, ವಾಹನ ಸವಾರರಲ್ಲಿ ಇರುವಂತಹ ಹಣ ಬಂಗಾರ ಪರ್ಸ್ ಮತ್ತು ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡುವಂತಹ ತಂಡವನ್ನು ಮೂಡಿಗೆರೆಯ ಪೊಲೀಸ್ ತಂಡ ಯಶಸ್ವಿಯಾಗಿ ಬಂಧಿಸಿದೆ.

ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಜನರನ್ನು ಬೆದರಿಸುವ ಈ ಸುಲಿಗೆಕೋರರ ತಂಡ, ಕಣ್ಣಿಗೆ ಖಾರದ ಪುಡಿಯನ್ನು ಎರಚಿ, ಪಿಸ್ತೂಲಿನಿಂದ ಬೆದರಿಸಿ ಬೇರೆಯವರ ಹಣವನ್ನು ದೋಚುತ್ತಿದ್ದ ಘಟನೆಗಳು ಬೆಳಕಿಗೆ ಬಂದಿದೆ. ಅಪರಾಧಿಗಳಾದ ಮೂಡಿಗೆರೆ ಆಜಾದ್ ನಗರದ ನಿವಾಸಿ ಶಿವಕುಮಾರ್, ಮಂಡ್ಯ ಜಿಲ್ಲೆ ಹೊಸೂರಿನ ಶಿವಕುಮಾರ, ಬೆಂಗಳೂರಿನ ಮರ್ಲೇ ಅಜಯ್ ಕುಮಾರ್ ಸಿಂಗ್, ಹೊಳೆನರಸೀಪುರದ ಕುಮಾರಸ್ವಾಮಿ ಬಂಧಿತ ಆರೋಪಿಗಳು.

ಪೊಲೀಸರು ಎಂದಿನಂತೆ ಗಸ್ತು ತಿರುಗುವಾಗ, ಬೇರೆ ವಾಹನ ಸವಾರರಿಂದ ಬಂದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.  ಸುಲಿಗೆಕೋರರ ಬಳಿಇದ್ದ ಟಾರ್ಚ್, ಕಾರದಪುಡಿ, ಡ್ರಾಗರ್,2 ಪಿಸ್ತೂಲ್ ಹಾಗೂ ಬಲವಾದ ಕಬ್ಬಿಣದ ರಾಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯೂ ಆರಂಭವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಈ ಕುರಿತು ಮಾಹಿತಿ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇಂತಹ ಒಂದು ಒಳ್ಳೆಯ ಕೆಲಸವನ್ನು ಮಾಡಿದ ಮೂಡಿಗೆರೆ ಪಿ.ಎಸ್.ಐ ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಪೂರ್ವಕ ಅಭಿನಂದನೆಗಳು.