ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಅದರಲ್ಲಿದ್ದ ಹಸುಗಳನ್ನು ನಾರ್ವೆಯ ಬಜರಂಗದಳದ ತಂಡ ಮತ್ತು ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.

ನಿನ್ನೆ ರಾತ್ರಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ದೇವರಾಜ್ ಎಂಬ ವ್ಯಕ್ತಿಯನ್ನು ಬೆಳಗೋಳದ ಸಮೀಪದ ಬಲಗದಲ್ಲಿ ನಾರ್ವೆಯ ಬಜರಂಗದಳ ಹಾಗೂ ಯುವಮೋರ್ಚಾ ಕಾರ್ಯಕರ್ತರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅಕ್ರಮ ಗೋ ಸಾಗಾಟಣೆ ತಡೆಯುವ ಕೆಲಸವನ್ನು ನಾರ್ವೆಯ ಶಬರಿ, ಪವನ್, ಪ್ರೇಮ್, ಇಂದ್ರೇಶ್ ಮಾಡಿದ್ದಾರೆ.



ಕಾರ್ಯಕರ್ತರ ಮಾಹಿತಿ ಮೇರೆಗೆ ದಿನಾಂಕ 16.07.2021 ರಂದು ರಾತ್ರಿ 06 ಗಂಟೆ 45 ನಿಮಿಷದ ಸಮಯದಲ್ಲಿ ಕೊಪ್ಪ ಪೊಲೀಸ್ ಠಾಣಾ ಅಧಿಕಾರಿ ವಿ ಶ್ರೀನಾಥ್ ರೆಡ್ಡಿ  ರವರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಗೂಡ್ಸ್ ನಲ್ಲಿದ್ದ ಇಬ್ಬರೂ ವ್ಯಕ್ತಿಗಳು ಓಡಿ ಹೋಗಿದ್ದಾರೆ. ಸ್ಥಳೀಯರನ್ನು ಕೇಳಿದಾಗ ಗಾಡಿ ದೇವರಾಜ್ ಮತ್ತು ಆತನ ಮಗನದ್ದೆಂದು ತಿಳಿದುಬಂದಿದೆ.
ಜಿಲ್ಲೆಯಾದ್ಯಂತ ಅಕ್ರಮವಾಗಿ ಗೋವುಗಳ ಸಾಗಾಟ ನಡೆಯುತ್ತಿದೆ, ಈ ಹಿಂದೆ ಬಜರಂಗದಳ ಪೊಲೀಸರಿಗೆ ಚೆಕ್ ಪೋಸ್ಟ್ ನಿರ್ಮಿಸುವಂತೆ ಮನವಿ ಮಾಡಿತ್ತು. ಆ ನಂತರ ಪೊಲೀಸ್ ಇಲಾಖೆ ಚಿಕ್ಕಮಗಳೂರು, ಎನ್ ಆರ್ ಪುರ, ಬಾಳೆಹೊನ್ನೂರು ಮುಂತಾದ ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದಿದೆ. ಪೊಲೀಸ್ ಇಲಾಖೆಯ ಜೊತೆ ಬಜರಂಗದಳ ಕೂಡ ಅಕ್ರಮ ಗೋಸಾಗಾಟ ತಡೆಯುವಲ್ಲಿ ಶ್ರಮಿಸುತ್ತಿದೆ - ಶಶಾಂಕ್ ಹೇರೂರು, ಬಜರಂಗದಳ ಜಿಲ್ಲಾ ಸಂಚಾಲಕ, ಚಿಕ್ಕಮಗಳೂರು