ಅಕ್ರಮವಾಗಿ ದೇಶದ ಒಳ ನುಗ್ಗಿರುವ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೊಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಹೊರಹಾಕಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ದ ವತಿಯಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದು ಮನವಿ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲೆಡೆ ಮನವಿಯನ್ನು ನೀಡಲಾಗುತ್ತಿದೆ.
ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡಲು ಸಂಚು ಮಾಡುತ್ತಿರುವ ಮತ್ತು ಅಶಾಂತಿಯನ್ನು ಉಂಟುಮಾಡಲು ಸದಾಕಾಲ ಮುನ್ನಲೆಯಲ್ಲಿರುವ, ಭಯೋತ್ಪಾದನೆಯನ್ನು ಮಾಡುವ ಬಾಂಗ್ಲಾದೇಶದ ನುಸುಳುಕೋರರನ್ನು ಈ ಕೂಡಲೇ ದೇಶದಿಂದ ಹೊರಗಟ್ಟಬೇಕು ಎಂದು ಚಿಕ್ಕಮಗಳೂರಿನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ್ ಪೈ, ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಶಾರೀರಿಕ ಪ್ರಮುಖ್ ರಂಗನಾಥ್, ಬಜರಂಗದಳದ ಶ್ಯಾಮ್ ವಿ ಗೌಡ, ಮಂಜು ಎಂ.ಜಿ ರೋಡ್ ಸುನೀಲ್ ಇದ್ದರು.
ಶೃಂಗೇರಿಯಲ್ಲಿ ಸಹ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ತಹಶೀಲ್ದಾರ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.
ಅಕ್ರಮ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಹೊರಹಾಕಲು ಮಾನ್ಯ ಸರ್ವೋಚ್ಛ ನ್ಯಾಯಾಲಯ ಆದೇಶ ಮಾಡಿದೆ,ಆ ಆದೇಶವನ್ನು ಆದಷ್ಟು ಶೀಘ್ರದಲ್ಲಿ ಯಥಾವತ್ತಾಗಿ ಜಾರಿಗೊಳಿಸಬೇಕು, ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಅನೇಕ ರೀತಿಯ ವಿಧ್ವಂಸಕ ಕೃತ್ಯಗಳನ್ನು ಮತ್ತು ಅತ್ಯಾಚಾರ, ಕಳ್ಳತನ, ಕೊಲೆ, ದಂಗೆಗಳನ್ನು ಮಾಡಿ ಇಡೀ ಸಮಾಜವನ್ನು ಭಯಭೀತಿಗೊಳಿಸುವ ಕಾರ್ಯದಲ್ಲಿ ಅಕ್ರಮ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೋಹಿಂಗ್ಯಾ ಮುಸ್ಲಿಮರು ತೊಡಗಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವರುಗಳು ಇಡೀ ಭಾರತದೇಶದ ಜನಸಂಖ್ಯಾ ಸ್ಫೋಟ, ಭಯೋತ್ಪಾದನಾ ಚಟುವಟಿಕೆಗಳಿಗೆ ವ್ಯವಸ್ಥಿತವಾದ ಷಡ್ಯಂತ್ರ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ, ಆದ್ದರಿಂದ ಇವರುಗಳನ್ನು ನ್ಯಾಯಾಲಯದ ಆದೇಶದಂತೆ ಬಾಂಗ್ಲಾದೇಶಕ್ಕೆ ಈ ಕೂಡಲೇ ಗಡಿಪಾರು ಮಾಡಬೇಕು ಎಂದು ಬಜರಂಗದಳದ ತಾಲೂಕು ಸಂಚಾಲಕ ರವಿಸಂಜಯ್ ಹೇಳಿದರು.
ತಾಲೂಕ್ ಸಹ ಸಂಚಾಲಕರಾದ ಪ್ರವೀಣ್ ಕಾವಡಿ, ಸತ್ಸಂಗ ಪ್ರಮುಖ್ ಸುಮಂತ್ ಭಟ್ ನಗರ ಸಹ ಸಂಚಾಲಕ ಸಂತೋಷ್ ಕೆರೆಮನೆ, ಕಿಗ್ಗಾ ಘಟಕ ಸಂಚಾಲಕರಾದ ಸುನಿಲ್ ಕಿಗ್ಗಾ, ಕಾಂಚಿನಗರ ಘಟಕ ಸಂಚಾಲಕರಾದ ಧನುಷ್, ಯತಿನ್ ಶೆಟ್ಟಿ ಉಪಸ್ಥಿತರಿದ್ದರು.
ಅಕ್ರಮ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೊಹಿಂಗ್ಯಾ ಮುಸ್ಲಿಮರನ್ನು ಹೊರಹಾಕಲು ಮಾನ್ಯ ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದ್ದು, ಆದೇಶ ಜಾರಿಗೊಳಿಸುವಂತೆ ಒತ್ತಡ ಹಾಕಲು ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳದ ಅಭಿಯಾನದ ಮೊದಲ ಹಂತದಲ್ಲಿ ಮಾನ್ಯ ಘನವೆತ್ತ ರಾಜ್ಯಪಾಲರಿಗೆ ಮತ್ತು ಮುಖ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಇವರುಗಳಿಗೆ ನರಸಿಂಹರಾಜಪುರ ಪ್ರಖಂಡ ಬಜರಂಗದಳದ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.







0 Comments