ದಕ್ಷಿಣ ಕರ್ನಾಟದ ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವಂತಹ ಹಾಗೂ ಅತೀ ಹೆಚ್ಚು ಜನರು ಉಪಯೋಗಿಸುತ್ತಿರುವ ಮತ್ತು ಸೇವಿಸುತ್ತಿರುವ ಕಾಫಿಯಿಂದ ಕೋವಿಡ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಮೇರಿಕದಲ್ಲಿ ನಡೆದ ಒಂದು ಅದ್ಯಯನದಲ್ಲಿ ತಿಳಿಸಿದ್ದಾರೆ.
ನಾವು ಕುಡಿಯೋ ಕಾಫಿಯಿಂದ ಕೋವಿಡ್ ಕಡಿಮೆ ಆಗುತ್ತದೆ ಎಂಬುದು ನಿಜವಾಗಿಯೂ ಅಚ್ಚರಿದಾಯಕವಾಗಿದೆ. ನಾವು ಪ್ರತಿದಿನ ಸೇವಿಸುತ್ತಿರುವ ಕಾಫಿಯಿಂದ ಕೋವಿಡ್ ತಡೆಯಬಹುದು ಎಂದು ಯಾರು ಭಾವಿಸಿರಲ್ಲಿಲ್ಲ ಅಮೇರಿಕದಲ್ಲಿ ನಡೆದ ಅದ್ಯಯನದ ವಿವರ ಈ ಕೆಳಗಿನಂತಿದೆ ಪ್ರತಿದಿನ ಒಂದು ಕಪ್ ಕಾಫಿ ಕುಡಿಯುವುದರಿಂದ ಕೋವಿಡ್ ತಗಲುವ ಅಪಾಯ ಕಡಿಮೆ ಎಂದು ವರದಿಯಾಗಿದೆ, ಕಾಫಿಯಿಂದ ಸಿ.ಆರ್.ಪಿ, ಇಂಟರ್ ಲ್ಯುಕಿನ್ -6 ಮತ್ತು ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಠರ್ 1 ನಂತಹ ಉರಿಯೂತದ ಬಯೋಮಾರ್ಕರ್ ಗಳ ಮೇಲೆ ಪ್ರಭಾವ ಬೀರುತ್ತದೆ. ಈ ಬಯೊಮಾರ್ಕರ್‌ಗಳು ಕೋವಿಡ್ ತೀವ್ರತೆ ಮತ್ತು ಮರಣಕ್ಕೆ ಸಂಬಂಧಿಸಿದೆ. ಕಾಫಿಯನ್ನು ಅತೀಯಾಗಿ ಸೇವಿಸುವಂತಹ ವಯಸ್ಸಾದವರಲ್ಲಿ ನ್ಯುಮೋನಿಯಾ ಅಪಾಯ ಕಡಿಮೆಯಾಗುತ್ತಿದೆ ಎಂದೂ ಹೇಳಲಾಗಿದೆ.
ಕೇವಲ ಕಾಫಿ ಮಾತ್ರವಲ್ಲದೇ ಕೊರೊನಾ ವೈರಸ್ ಅಪಾಯವನ್ನು ಕಡಿಮೆ ಮಾಡಲು ನೀವು ಸೇವಿಸಬಹುದಾದ ಇತರ ಆಹಾರಗಳೂ ಇವೆಯಂತೆ ಹೆಚ್ಚು ತರಕಾರಿಗಳನ್ನು ಸೇವಿಸುವುದು ಹಾಗೂ ಶೇಖರಿಸಿದ ಮಾಂಸದ ಸೇವನೆಯನ್ನು ಕಡಿಮೆ ಮಾಡುವುದು ಸಹ ವೈರಸ್ ಕಡೆಗೆ ಉತ್ತಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಾವು ಸೇವಿಸುವ ಕಾಫಿಯಿಂದ ಕೋವಿಡ್ ನಿಯಂತ್ರಿಸಬಹುದು ಎಂಬುದು ನಿಜಕ್ಕೂ ಅದ್ಬುತವಾಗಿದೆ ಹಾಗಂಥ ಅತಿಯಾಗಿ ಸೇವಿಸುವುದರಿಂದ ಅಡ್ಡಪರಿಣಾಮ ಬೀರುತ್ತದೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಎನ್ನುವುದು ಯಾವಾಗಲೂ ನೆನಪಿಡ ಬೇಕಾಗುತ್ತದೆ ದಿನಕ್ಕೆ 3-4 ಕಪ್ ಮೀರಬಾರದು ಎಂದು ಡಾ.ವಿವೇಕ್ ಝಾ ತಿಳಿಸಿದ್ದಾರೆ.
ಹೆಚ್ಚು ಕಾಫಿ ಕುಡಿಯುವುದರಿಂದ ಎದೆಯುರಿ ಉಂಟಾಗುತ್ತದೆ, ಇದು ಗಾಬರಿಗೂ ಕಾರಣವಾಗುತ್ತದೆ. ಕಾಫಿ ಮೂತ್ರವರ್ಧಕ ವಾಗಿರುವುದರಿಂದ ಪದೇ ಪದೇ ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ ನಿದ್ದೆಗೂ ಕೂಡ ತೊಂದರೆ ಉಂಟುಮಾಡುತ್ತದೆ ಆದ್ದರಿಂದ ನಮ್ಮ ಚರ್ಮ ಕೂದಲಿನ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ಮಹಿಳೆಯರಲ್ಲಿ ಗರ್ಭಧರಿಸಲು ಕಷ್ಟವಾಗುತ್ತದೆ ರಕ್ತದಲ್ಲಿನ ಕೊಬ್ಬಿನ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಮುಖದ ಸೆಳೆತವೂ ಉಂಟಾಗುತ್ತದೆ. ಕಾಫಿಯ ಸೇವನೆಯು ಈ ರೀತಿಯಾಗಿ ಕೋವಿಡ್ ತಡೆಯುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ಕೋವಿಡ್ 19 ಬಗ್ಗೆ ನಿಮಗೆ ಅತಿಯಾದ ಭಯ ಆತಂಕವಿದ್ದರೆ ಅದನ್ನು ನಿವಾರಿಸಲು ನೀವು ನಿಮ್ಮ ದಿನನಿತ್ಯದ ಜೀವನದಲ್ಲಿ ಕಾಫಿಯನ್ನು ಸೇವಿಸಬಹುದು. ಆದರೆ ಮಿತವಾಗಿರಬೇಕು.




0 Comments