ಶೃಂಗೇರಿ ಆಸಿಡ್ ದಾಳಿ ಪ್ರಕರಣ ಸಂಬಂಧ ಆರೋಪ ಸಾಬೀತಾಗಿದೆ.
2015ರಲ್ಲಿ ಏಪ್ರಿಲ್ ತಿಂಗಳ 18ರಂದು ಶೃಂಗೇರಿಯ ಮೆಣಸೆಯಲ್ಲಿ ವಾಸಿಸುತ್ತಿದ್ದ, ಶೃಂಗೇರಿಯ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಯುವತಿಯ ಮೇಲೆ ನಾಲ್ವರು ಸೇರಿ ಆಸಿಡ್ ದಾಳಿ ಮಾಡುವ ಮೂಲಕ ಅಮಾನವೀಯ ಕೃತ್ಯ ಮೆರೆದಿದ್ದರು.
ಅಂದಿನ ಶೃಂಗೇರಿಯ ವೃತ್ತ ನಿರೀಕ್ಷಕರಾಗಿದ್ದ ಸುಧೀರ್ ಹೆಗ್ಡೆ ಅವರ ನೇತೃತ್ವದಲ್ಲಿ ತನಿಖೆ ನಡೆದು, ಕಳೆದ 6 ವರ್ಷಗಳಿಂದ ಪ್ರಕರಣ ಕೋರ್ಟ್ ನಲ್ಲಿತ್ತು.
ಇದೀಗ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯವು ತೀರ್ಪನ್ನು ನೀಡಿದ್ದು ನಾಲ್ವರು ಆರೋಪಿಗಳಾದ ಶೃಂಗೇರಿಯಲ್ಲಿ ಎಸ್.ಟಿ.ಡಿ ಬೂತ್ ನಡೆಸುತ್ತಿದ್ದ ಗಣೇಶ ಅಲಿಯಾಸ್ ಗಣಿ, ಕಾರ್ಕಳದ ಅಬ್ದುಲ್ ಮಜೀದ್, ಚಾಲಕನಾಗಿದ್ದ ಮೊಹಮ್ಮದ್ ಕಬೀರ್ ಹಾಗೂ ವಿನೋದ್ ಈ ಎಲ್ಲರೂ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದ್ದು, ಜಾಮೀನಿನ ಮೇಲಿದ್ದ ಆರೋಪಿಗಳನ್ನು ಪೊಲೀಸರು ಸಧ್ಯ ಬಂಧಿಸಿದ್ದಾರೆ.
ಶಿಕ್ಷೆಯ ಪ್ರಮಾಣವನ್ನು 15 ಜುಲೈ 2021ನೇ ತಾರೀಖಿಗೆ ಕಾಯ್ದಿರಿಸಲಾಗಿದೆ.




0 Comments