ಇಂದು ಶೃಂಗೇರಿಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಸ್ಲಮ್ ಏರಿಯಾ ಎಂದು ಗುರುತಿಸಲ್ಪಡುವ ಹನುಮಂತನಗರದಲ್ಲಿ ಇಂದು ಸ್ಲಮ್ ಬೋರ್ಡ್ ವತಿಯಿಂದ ರಿಟೈನಿಂಗ್ ವಾಲ್ ನ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿತು.
ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ. ಡಿ ರಾಜೇಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದರು.ಮಾಜಿ ತಾಲೂಕು ಪಂಚಾಯ್ತಿ ಅಧ್ಯಕ್ಷರಾದ ಜಯಶೀಲ ಚಂದ್ರಶೇಖರ್ ಅವರು ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ರತ್ನಾಕರ, ಲತಾ ಗುರುದತ್, ರೂಪಾ ಪೈ ಇನ್ನಿತರರು ಇದ್ದರು.
ಮೂರು ಸ್ಥಳಗಳಲ್ಲಿ ಈ ಕಾಮಗಾರಿಯು ನಡೆಯಲಿದ್ದು,ಇಂದು ಗುದ್ದಲಿ ಪೂಜೆಯನ್ನು ಭಾಗ್ಯ ಕಾಶಿ ಅವರ ಮನೆಯ ಹತ್ತಿರ ನಡೆಯಿತು. ಸ್ಲಮ್ ಬೋರ್ಡ್ ನಿಂದ 16 ಲಕ್ಷ ವೆಚ್ಚದಲ್ಲಿ 50 ಮೀಟರ್ ಉದ್ದ 3 ಮೀಟರ್ ಎತ್ತರದ 03 ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಕಾಮಗಾರಿ ಆಗುತ್ತದೆ ಎಂದು ತಿಳಿದು ಬಂದಿದೆ.





0 Comments