ಮಲೆನಾಡಿನ ಭಾಗಗಳಲ್ಲಿ ಪ್ರಜಾಕೀಯ ಪಕ್ಷವು ನೆಲೆಯೂರುತ್ತಿದ್ದು ಇದೀಗ ಮೂಡಿಗೆರೆ ತಾಲೂಕಿನ ನಿಡುವಳೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಮರ್ಕಲ್ ಅವರ ಮಾದರಿ ಕೆಲಸವೂ ಎಲ್ಲೆಡೆ ಶ್ಲಾಘನೀಯವಾಗಿದೆ. ಈ ಪಂಚಾಯಿತಿಯ ಸದಸ್ಯನು ಚುನಾವಣೆ ಗೆದ್ದ ನಂತರದ ದಿನಗಳಲ್ಲಿ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳಿಗೆ ತೆರಳಿ ಆ ಮನೆಯ ಕುಟುಂಬ ಸದಸ್ಯರ ವಿವರವನ್ನು ಪಡೆದು, ಅವರಿಗೆ ನೀಡುವ ಸವಲತ್ತುಗಳ ಕುರಿತು ವಿವರಣೆಯನ್ನು ನೀಡುತ್ತಾ ಆ ಗ್ರಾಮದ ಎಲ್ಲರ ಧ್ವನಿಯಾಗಿ ಸಚಿನ್ ಮರ್ಕಲ್ ಕೆಲಸ ಮಾಡುತ್ತಿದ್ದಾರೆ.
ಈ ಬಾರಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಬರುವ ಕ್ರಿಯಾಯೋಜನೆಯ ಪ್ರತಿಯನ್ನು ಸಹ ಪ್ರತಿಯೊಬ್ಬರಿಗೂ ತಲುಪುವ ಹಾಗೆ ಯೋಜನೆಯನ್ನು ಮಾಡಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷದ ಆಶಯದಂತೆ ಕಾರ್ಯಕರ್ತರಿಂದ ಗ್ರಾಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಈ ಉತ್ತಮ ಕಾಯಕಕ್ಕೆ ಗ್ರಾಮಸ್ಥರು ಅಭಿನಂದನೆಯನ್ನು ತಿಳಿಸಿದ್ದಾರೆ.

0 Comments