ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು,ಚಿಕ್ಕಮಗಳೂರಿನ ಜನಪ್ರಿಯ ಶಾಸಕರಾದ ಸಿ.ಟಿ ರವಿ ಅವರ 54 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಂದು ಜಾವಳಿಯ ಶ್ರೀ ಹೇಮಾವತಿ ನದಿ ಮೂಲ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಜ್ಯದ ವಿವಿಧೆಡೆ ಯಲ್ಲಿ ಹಲವಾರು ರೀತಿಯಲ್ಲಿ ಶಾಸಕ ಸಿಟಿ ರವಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ ಅಂತೆಯೇ ಇಂದು ಜಾವಳಿಯ ಹೇಮಾವತಿ ನದಿ ಮೂಲದ ಮಹಾಗಣಪತಿಯ ದೇವಸ್ಥಾನದಲ್ಲಿ ಕಾರ್ಯಕರ್ತರು ಸೇರಿ ವಿಶೇಷ ಪೂಜೆಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಮೂಡಿಗೆರೆ ತಾಲೂಕು ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಪ್ರಮೋದ್, ಆಟೋ ವಸಂತ್ ಇದ್ದರು.




0 Comments