ಶೃಂಗೇರಿ : ಕಾರ್ಗಿಲ್  ವಿಜಯ ದಿವಸ್ ನ ಅಂಗವಾಗಿ ಹಿಂದೂ ಸೇವಾ ಪ್ರತಿಷ್ಠಾನ ಶೃಂಗೇರಿ ಇವರ ವತಿಯಿಂದ  ಪಟ್ಟಣದ ಕಟ್ಟೆ ಬಾಗಿಲು ವೃತ್ತದಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ,ಮಾಡಿದ ಕಾರ್ಗಿಲ್ ವೀರ ಯೋಧರ ಸ್ಮರಣಾ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೃಂಗೇರಿಯ ಬಿಡಿಎನ್ ಟ್ರೇಡರ್ಸ್ ನ ಮಾಲೀಕರಾದ ಗೋಕುಲದಾಸ್ ನಾಯಕ್ ಅವರು ವಹಿಸಿಕೊಂಡಿದ್ದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಆಪರೇಷನ್ ವಿಜಯ್ ಎಂಬ ಹೆಸರಿನೊಂದಿಗೆ ಕಾರ್ಯಾಚರಣೆ ನಡೆಸಿ ಕಾರ್ಗಿಲ್ ಯುದ್ಧವನ್ನು ಗೆಲ್ಲಿಸಿದ ಹಿರಿಮೆ ನಮ್ಮ ಸೈನಿಕರದ್ದು, ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಯೋಧರನ್ನು ಸದಾಕಾಲ ನಾವು ನೆನೆಯಬೇಕು ಎಂದರು. 

ದಿಕ್ಸೂಚಿ ಭಾಷಣಕಾರರಾಗಿ ಮನೋಹರ್ ಜೈಪುರ ಅವರು ಇದ್ದರು. ಮೇಗೂರು ಸಂತೋಷ್, ಹಂಚಲಿ ರಾಘವೇಂದ್ರ, ನೂತನ ಸೂರ್ಯ, ಆದರ್ಶ, ರವಿ ಸಂಜಯ, ರವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮೂಡಿಗೆರೆಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದ ಲಯನ್ಸ್ ಸರ್ಕಲ್ ನಲ್ಲಿ ಕಾರ್ಗಿಲ್ ವಿಜಯ ದಿವಸದ ಆಚರಣೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಯೋಧರಾದ ಮುಗ್ರಹಳ್ಳಿ ಉಮೇಶ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದರು. ಯುವಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಿಕ್ ಗೌಡ, ಯುವ ಮೋರ್ಚಾ ಅಧ್ಯಕ್ಷ ಅವಿನಾಶ್, ಭರತ್, ಸರೋಜಾ ಸುರೇಂದ್ರ ಸೇರಿದಂತೆ ಹಲವಾರು ಯುವ ಮೋರ್ಚಾ ಕಾರ್ಯಕರ್ತರು ಹಾಜರಿದ್ದರು

ನರಸಿಂಹರಾಜಪುರ: ಬಿಜೆಪಿ ಯುವ ಮೋರ್ಚಾ ನರಸಿಂಹರಾಜಪುರ ಮಂಡಲದ ವತಿಯಿಂದ ಕಾರ್ಗಿಲ್ ಮನನ ಕಾರ್ಯಕ್ರಮ ಇಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ನಿವೃತ್ತ ಯೋಧರಾದ ಯತಿರಾಜ್ ಪ್ರವೀಣ್ ರವಿ ಅವರನ್ನು ಸನ್ಮಾನಿಸುವ ಮೂಲಕ ವಿಶೇಷವಾಗಿ ಕಾರ್ಗಿಲ್ ವಿಜಯ ದಿವಸ ವನ್ನು ಆಚರಿಸಿದರು. ಪ್ರಾಸ್ತಾವಿಕ ನುಡಿಯನ್ನಾಡಿದ ಶಶಿ ಆಲ್ದೂರು ಅವರು ತ್ರಿವರ್ಣಧ್ವಜ ಹಾರುತ್ತಿರುವುದು ಯೋಧರ ಉಸಿರಿನಿಂದ, ಹುತಾತ್ಮರಾದ ಯೋಧರ ಬಗ್ಗೆ ಇಂದಿನ ಯುವಜನತೆಗೆ ತಿಳಿಸಿ ಭವಿಷ್ಯದಲ್ಲಿ ಯುವಕರನ್ನು ಗಡಿ ಕಾಯುವ ಯೋಧರನ್ನಾಗಿ ರೂಪಿಸಬೇಕು ಎಂದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಯೋಧ ಯತಿರಾಜ್ ಅವರು ಸೈನಿಕರಿಗೆ ಬೆಂಬಲ ನೀಡಿದ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಆರ್ ಪುರ ಮಂಡಲದ ಅಧ್ಯಕ್ಷರಾದ ಅರುಣ್ ಕುಮಾರ್ ವಹಿಸಿಕೊಂಡಿದ್ದರು, ಪ್ರಧಾನ ಕಾರ್ಯದರ್ಶಿಯಾದ ಸಚಿನ್, ಕಾರ್ಯದರ್ಶಿ ಸುದರ್ಶನ್, ಉಪಾಧ್ಯಕ್ಷ ನೂತನ್ ಇದ್ದರು.

ಚಿಕ್ಕಮಗಳೂರು ಬಿಜೆಪಿ ಯುವಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಯೋಧ ಸುಬೇದಾರ್ ಬಸವರಾಜ್  ಅವರನ್ನು ಸನ್ಮಾನಿಸಲಾಯಿತು.