ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೆಳವಾಡಿ ವೆಂಕಟೇಶ್ ಮೂರ್ತಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವವನ್ನು ತಂದಿದ್ದಾರೆ.
ಮಲೆನಾಡಿನಲ್ಲಿ ಅಷ್ಟೊಂದು ಸಾಧಕರಿಲ್ಲ ಎಂಬುದು ಹಲವರ ಅಭಿಪ್ರಾಯ, ಆದರೆ ಸಾಧಕರಿದ್ದೂ ಅವರ ಸಾಧನೆಯನ್ನು ಜನರಿಗೆ ತಲುಪಿಸುವಲ್ಲಿ ಎಡವುತ್ತಿದ್ದೇವೆಯೇ ಎನಿಸುತ್ತದೆ.
ಏಕೆಂದರೆ ಮಲೆನಾಡಿನ ಕೊಪ್ಪ ತಾಲೂಕಿನಲ್ಲಿ ಹುಟ್ಟಿ ಬೆಳೆದು ಉದ್ಯಮಿಯಾಗಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಭಾಜನರಾಗರುವ ವೆಂಕಟೇಶ್ ಮೂರ್ತಿ ಎಂಬುವವರ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ.
ರಿಸೈಕ್ಲಿಂಗ್ ಇಂಟರ್ನ್ಯಾಷನಲ್ ಎಂಬ ಪ್ರತಿಷ್ಠಿತ ಜರ್ನಲ್ ನಡೆಸಿದ ಸರ್ವೆಯಲ್ಲಿ ಭಾರತ ಮೂಲದ ವೆಂಕಟೇಶ್ ಮೂರ್ತಿ ಅವರು 28ನೇ ರ‍್ಯಾಂಕ್ ಪಡೆದಿದ್ದಾರೆ. ವಿಶ್ವದ 100 ಪ್ರಭಾವಿ ಜನರನ್ನು ಈ ಪ್ರಕ್ರಿಯೆಗೆ ಆಯ್ಕೆ ಮಾಡಲಾಗುತ್ತದೆ.
‘ಈ-ತ್ಯಾಜ್ಯ’ ಇಂಡಸ್ಟ್ರಿಯಲ್ಲಿ ಸರಿ ಸುಮಾರು 25 ವರ್ಷ ಅನುಭವಗಳಿದ್ದು ಹತ್ತು ಹಲವು ಸಾಧನೆಗಳನ್ನು ಮಾಡಿರುತ್ತಾರೆ.ಶ್ರೀಯುತರು ತಮ್ಮದೆ ಸಂಸ್ಥೆಯಾದ Vans Chemistry ಎಂಬ ಸಂಸ್ಥೆಯ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿರುತ್ತಾರೆ ಜೊತೆಗೆ USA ವಾಷಿಂಗ್ಟನ್ ಡಿಸಿ, SERI ಯ ವೈಸ್ ಛೇರ್ಮನ್ ಮತ್ತು ಬೋರ್ಡ್ ಆಫ್ ಡೈರಕ್ಟರ್ ಆಗಿದ್ದು, ‘ಈ-ತ್ಯಾಜ್ಯ’ ಸಂಸ್ಥೆ ಯ ಏಷ್ಯಾ ಖಂಡದ ರಾಯಭಾರಿಯಾಗಿದ್ದಾರೆ
ಇವರು 2019ರ ಸಿಂಗಾಪುರದ ಸಿಂಗಾರ ಪುರಸ್ಕಾರ ಹಾಗು 2014ರ ಅನಿವಾಸಿ ಭಾರತೀಯ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಶ್ರೀಯುತರು 60ಕ್ಕೂ ಹೆಚ್ಚು ದೇಶಗಳನ್ನು ಪ್ರವಾಸ ಮಾಡಿದಿರುತ್ತಾರೆ ಹಾಗೂ ಹತ್ತಕ್ಕೂ ಹೆಚ್ಚು ಯೋಜನೆಗಳನ್ನು ಅಮೇರಿಕಾ, ಮಲೇಷಿಯಾ, ದಕ್ಷಿಣ ಆಫ್ರಿಕಾ , ಸಿಂಗಾಪುರ್ ಇತ್ಯಾದಿ ದೇಶಗಳ ಸಹಭಾಗಿತ್ವದೊಂದಿಗೆ ಮಾಡಿದ್ದಾರೆ.
ಇ-ತ್ಯಾಜ್ಯದಲ್ಲಿ ತಮ್ಮದೇ ಆದ ತಂತ್ರಜ್ಞಾನ ಬಳಸಿ ಅದರಲ್ಲಿ ಬರುವ ಚಿನ್ನ, ತಾಮ್ರ, ಅಲುಮಿನಿಯಂ, ಪ್ಲಾಟಿನಂ, ಪೇಲಾಡಿಯಂ ಹಾಗೂ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಮರುಬಳಕೆ ಮಾಡುವಂತೆ ಹಾಗೂ ಇದರಲ್ಲಿ ಬರುವ ವಿಷಕಾರಕ ಅಂಶಗಳನ್ನೂ ಸಂಸ್ಕರಿಸಿದ್ದಾರೆ.
ಭಾರತದಂತಹ ದೇಶಗಳಲ್ಲಿ ಇ-ತ್ಯಾಜ್ಯವನ್ನು ಅಸಂಪ್ರದಾಯ ಹಾಗು ಅವೈಜ್ಞಾನಿಕವಾಗಿ ಸಂಸ್ಕರಿಸುವುದರಿಂದ ಗಂಭೀರ ಆರೋಗ್ಯ ಮತ್ತು ಮಾಲಿನ ಸಮಸ್ಯೆಗಳು ಉಂಟಾಗುವುದರಿಂದ ಶ್ರೀ ವೆಂಕಟೇಶ್ ಮೂರ್ತಿಯವರ ಜ್ಞಾನ ಮತ್ತು ಅನುಭವದಿಂದ ಇದನ್ನು ತಡೆಯುವ ಯೋಜನೆಗಳಲ್ಲಿ ಇವರ ಸಂಸ್ಥೆಯು ಮುಂಚೂಣಿಯಲ್ಲಿದೆ.
ಭಾರತ ದೇಶದ ಹೆಸರಿಗೆ ಇನ್ನಷ್ಟು ಗರಿಮೆ ನೀಡಿದ ಮಲೆನಾಡಿನ ಹೆಮ್ಮೆಯ ವೆಂಕಟೇಶ್ ಮೂರ್ತಿ ಅವರು ಕನ್ನಡಿಗರಿಗೆ ಇನ್ನಷ್ಟು ಸ್ಫೂರ್ತಿ ನೀಡಿದ್ದಾರೆ.





0 Comments