ಶೃಂಗೇರಿ - ಹೊರನಾಡು ಹೋಗುವ ಮಾರ್ಗ ಮಧ್ಯೆ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಅಬ್ಬಿಕಲ್ಲಿನಲ್ಲಿ ಧರೆ ಕುಸಿತದ ಪರಿಣಾಮ ಮೂರ್ನಾಲ್ಕು ಮರಗಳು ರಸ್ತೆಗೆ ಬಿದ್ದಿರುವುದರಿಂದ ಸಂಚಾರ ಸಂಪೂರ್ಣ ಬಂದಾಗಿದೆ.
ಇದರಿಂದಾಗಿ ಹಲವು ಗ್ರಾಮಗಳ ನಡುವಿನ ಸಂಚಾರ ಸಂಪೂರ್ಣ ಬಂದ್ ಆಗಿದೆ.ಹೊಸದಾಗಿ ರಸ್ತೆ ಮಾಡುವಾಗ ಅವೈಜ್ಞಾನಿಕವಾಗಿ ಧರೆಯ ಮಣ್ಣನ್ನು ಸಮಗೊಳಿಸಲಾಗಿದೆ, ಇದರಿಂದಾಗಿ ಹಲವೆಡೆ ಈ ಸಮಸ್ಯೆ ತಲೆದೋರಿದೆ.
ಇತ್ತೀಚೆಗಷ್ಟೆ ಇದೇ ಜಾಗದಲ್ಲಿ ಮರ ಬಿದ್ದು ಅದನ್ನು ತೆರವುಗೊಳಿಸಲಾಗಿತ್ತು, ಈಗ ಪುನಃ ಮರಗಳು ಬಿದ್ದಿವೆ. ಜೊತೆಗೆ ಮಣ್ಣು ಸಹ ರಸ್ತೆಗೆ ಬಂದಿದೆ.
ಹೀಗೆಯೇ ಮುಂದುವರಿದರೆ ಮಳೆಗಾಲ ಪೂರ್ತಿ ಸಂಪರ್ಕವೇ ಇಲ್ಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರಾದ ಶಶಿ ಬೆತ್ತದಕೊಳಲು.



0 Comments