ಚಿಕ್ಕಮಗಳೂರು: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಶೈಕ್ಷಣಿಕ ಗುಣಮಟ್ಟದಲ್ಲಿ ಪ್ರಗತಿ ಸಾಧಿಸಿ ರಾಷ್ಟ್ರಮಟ್ಟದಲ್ಲಿ ಚಿಕ್ಕಮಗಳೂರು ಪ್ರತಿನಿಧಿಸುವ ಹಾಗೆ ಮಾಡಿದೆ ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಸರ್ಕಾರಿ ಶಾಲೆ ಹಾಗೂ ತರೀಕೆರೆ ತಾಲೂಕಿನ ಸೊಕ್ಕೆ ಪ್ರೌಡಶಾಲೆ. ಈ ಎರಡು ಶಾಲೆಗಳು ಸಿಸ್ಲೆಪ್ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣದ ಅಳವಡಿಕೆ ಕುರಿತು ವಿಡಿಯೋ ಚಿತ್ರೀಕರಣದ ದಾಖಲೀಕರಣದಲ್ಲಿ  ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. 

ಈ ಪ್ರಕ್ರಿಯೆಯು ಶಾಲಾ ಗುಣಮಟ್ಟ, ತಾಂತ್ರಿಕತೆಯ ಅಳವಡಿಕೆ ಹಾಗೂ ಬಳಸುವಿಕೆ, ಸಮುದಾಯ ಸಹಭಾಗಿತ್ವ, ಶಾಲಾ ಪರಿಸರ, ಸಂಸ್ಕೃತಿ, ಸಮುದಾಯದ ಸಹಭಾಗಿತ್ವ, ಮುಂತಾದ  ವಿಷಯಗಳ ಕುರಿತು ಆರು ನಿಮಿಷಗಳ ವಿಡಿಯೋ ಚಿತ್ರೀಕರಣ ಮಾಡಿ ದಾಖಲು ಮಾಡಲಾಗಿದ್ದು. ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ.

ಖಾಸಗೀ ಶಾಲೆಗಳಿಗೆ ಸೆಡ್ಡು ಹೊಡೆದು ಉನ್ನತ ಮಟ್ಟಕ್ಕೆ ಸಾಧನೆ ಮಾಡಿದ ಈ ಎರಡು ಶಾಲೆಗಳು ಉಳಿದ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿ  ಹೊರಹೊಮ್ಮಿದೆ.