ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಇಂದು ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಪ್ರವಾಸವನ್ನು ಕೈಗೊಂಡಿದ್ದರು. ಕಳೆದ ವರ್ಷದ ಮಳೆಯಿಂದಾಗಿ ಹಾನಿಗೊಳಗಾದ ಮನೆ, ಅಥವಾ ಆಸ್ತಿಯನ್ನು ನಾಶಮಾಡಿಕೊಂಡಿದ್ದ ಮಲೆಮನೆ ಭಾಗದ ಸುಮಾರು ಐದು ಮನೆಗಳಿಗೆ ಸರ್ಕಾರ ಸಮರ್ಪಕವಾದ ವ್ಯವಸ್ಥೆಯನ್ನು ಕಲ್ಪಿಸಿರುವುದಿಲ್ಲ ಎಂದು ಮನಗಂಡ ಉಸ್ತುವಾರಿ ಸಚಿವ ಅಂಗಾರ ಅವರು ಇಂದು ಅವರುಗಳ ಮುಂದೆಯೇ ಪರಿಸ್ಥಿತಿಯನ್ನು ಗಮನಹರಿಸಿದರು ಹಾಗೂ ಇನ್ನೂ ಕೆಲವೇ ಬೆರಳೆಣಿಕೆಯ ದಿನಗಳೊಳಗೆ ಈ ಸಮಸ್ಯೆಗೆ ಸಂಪೂರ್ಣ ಪರಿಹಾರವನ್ನು ನೀಡುತ್ತೇವೆಂದು ಭರವಸೆಯನ್ನು ನೀಡಿದರು.
ಈ ಮಧ್ಯೆ ನಿರಾಶ್ರಿತರ ಆಕ್ರೋಶವು ಹೆಚ್ಚಾಗಿದ್ದು ಎರಡು ವರ್ಷದ ಹಿಂದೆಯೇ ಕಂದಾಯ ಸಚಿವರು ಭೇಟಿ ನೀಡಿದ್ದರೂ ಕೂಡ ಯಾವುದೇ ರೀತಿಯ ಸೌಲಭ್ಯಗಳಾಗಲಿ ಪರಿಹಾರವಾಗಲಿ ನಮಗೆ ದೊರೆಯಲಿಲ್ಲ ಮುಂದಿನ ದಿನಗಳಲ್ಲಿ ಇದೇ ರೀತಿಯ ವರ್ತನೆ ಮುಂದುವರೆದರೆ ಬರೀ ಆಶ್ವಾಸನೆಗಳು ಎದುರಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂಬ ಬಹಿರಂಗ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂಪಿ ಕುಮಾರಸ್ವಾಮಿ, ದೀಪಕ್ ದೊಡ್ಡಯ್ಯ, ಬಾಳೂರು ಭರತ್, ಶಶಿ ಜಾವಳಿ ಕಾಳಿಕಟ್ಟೆ, ಶಿವರಾಜ್ ಕಲ್ಮನೆ, ವಿಜಯೇಂದ್ರ ಮರ್ಕಲ್, ಕೆಸಿ ರತನ್, ಹಾಗೂ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತ ಮಿತ್ರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


0 Comments