ಕೊಪ್ಪ ತಾಲೂಕಿನ ಜಯಪುರ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದೆ. ಬಿಡದೆ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಹಲವಾರು ಅನಾಹುತಗಳು ಸಂಭವಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಮಲೆನಾಡಿನ ಹೆಚ್ಚಿನ ಭಾಗಗಳಲ್ಲಿ ಸೇತುವೆ ಕುಸಿತ, ಧರೆ ಕುಸಿತ ಒಂದೆಡೆಯಾದರೆ, ಮತ್ತೊಂದೆಡೆ ರಭಸದ ಮಳೆಗೆ ರಸ್ತೆಗಳೇ ಕೊಚ್ಚಿ ಹೋಗುತ್ತಿದೆ.
ಜಯಪುರದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ತೀರ್ಥಕೆರೆ ಬಳಿ ಭೂ ಕುಸಿತ ಉಂಟಾಗಿದೆ. ಈ ಭಾಗವು ಗುಡ್ಡೆ ತೋಟ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರುತ್ತದೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ https://forms.gle/hJoKNWwWAXZRZiZF6
ಒಳಚರಂಡಿಗಳು ಸಮರ್ಪಕವಾಗಿಲ್ಲದ ಕಾರಣ ನೀರು ಎಲ್ಲೆಂದರಲ್ಲಿ ಹರಿದು ಈ ರೀತಿಯ ಸಮಸ್ಯೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಜಯಪುರ ಮಾರ್ಗದಿಂದ ಬಸರೀಕಟ್ಟೆಗೆ ಹೋಗುವಲ್ಲಿ ಹೊಸ ರಸ್ತೆಯನ್ನು ಮಾಡಲಾಗಿದೆ ಆದರೆ, ಎಲ್ಲೆಂದರಲ್ಲಿ ನೀರು ಹರಿಯುವುದರಿಂದ ಭೂ ಕುಸಿತ ಉಂಟಾಗುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಈ ಬಗ್ಗೆ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
visit: www.kavyaherbaloil.com
ನಿನ್ನೆಯಷ್ಟೇ ಧರೆ ಕುಸಿತ ಉಂಟಾಗಿ ಶಿರಾಡಿ ಘಾಟಿ ಬಂದ್ ಆದ ಹಿನ್ನೆಲೆ, ಎಲ್ಲಾ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಸಾಗುತ್ತಿವೆ. ಎಲ್ಲಾ ವಾಹನಗಳು ನಿರಂತರವಾಗಿ ಒಂದೇ ಮಾರ್ಗದಲ್ಲಿ ಸಾಗುತ್ತಿರುವ ಕಾರಣ, ಚಾರ್ಮಾಡಿ ಘಾಟ್ ನ 7ನೆಯ ತಿರುವಿನಲ್ಲಿ ಧರೆ ಕುಸಿತವು ಸಂಭವಿಸಿದೆ. ಮಂಜು ಮುಸುಕಿದ ವಾತಾವರಣವಿದ್ದು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿದೆ.
ಮರ ಬಿದ್ದು ಕೆರೆಕಟ್ಟೆ ರಸ್ತೆ ಬಂದ್:ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಕಾರಣ ಶೃಂಗೇರಿಯ ಕೆರೆಕಟ್ಟೆ-ಕಾರ್ಕಳ ರಸ್ತೆ ಸಂಚಾರ ಬಂದ್ ಆಗಿ ಒಂದು ಗಂಟೆಗಳ ಕಾಲ ವಾಹನ ಸಂಚಾರರು ಪರದಾಡುವಂತಾಗಿತ್ತು.
ನಾಲೆ ಒಡೆದು ಮನೆಗೆ ಹಾನಿ:ಎನ್. ಆರ್ ಪುರ ತಾಲೂಕಿನ ಶೆಟ್ಟಿ ಕೊಪ್ಪದಲ್ಲಿ ನಾಲೆ ಒಡೆದು ನೀರು ನುಗ್ಗಿ ಮನೆಯೊಂದು ಜಲಾವೃತವಾದ ಪರಿಣಾಮ 9ಜನರನ್ನು ಅಪಾಯದಿಂದ ರಕ್ಷಿಸಲಾಗಿದೆ.
ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಹಾಗೂ ಅಗ್ನಿ ಶಾಮಕ ಸಿಬ್ಬಂದಿ ನೆರವಿನಿಂದ ಸುರಕ್ಷಿತವಾಗಿ ರಕ್ಷಿಸಲಾಯಿತು.
ಅತಿಯಾಗಿ ಗಾಳಿ ಮಳೆ ಸುರಿಯುತ್ತಿರುವುದರಿಂದ ವಾಹನ ಸವಾರರು ಎಚ್ಚರಿಕೆ ಇಂದ ಪ್ರಯಾಣ ಮಾಡಲು ಸೂಚಿಸಿದೆ.





0 Comments