ಸಾಲ ತೀರಿಸಲು ಮನೆ ಮಾರುವವರನ್ನು ನೋಡಿರುತ್ತೇವೆ, ತೋಟ ಮಾರುವವರನ್ನು ನೋಡಿರುತ್ತೇವೆ, ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ದೇಹದ ಕಿಡ್ನಿ ಯನ್ನೇ ಮಾರಲು ತಯಾರಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್ ನಿವಾಸಿ ಹಕೀಮ್ ಎನ್ನುವ ವ್ಯಕ್ತಿ ಲಾಕ್ ಡೌನ್ ಸಮಯದಲ್ಲಿ ದುಡಿಮೆ ಇಲ್ಲದೆ ಬೇಸತ್ತು ಕಿಡ್ನಿ ಮಾರುತ್ತೇನೆಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಹಂಚಿ ಕೊಂಡಿದ್ದಾನೆ.
ವೃತ್ತಿಯಲ್ಲಿ ಚಾಲಕನಾಗಿರುವ ಹಕೀಮ್, ವಾಹನದ ಮೇಲೆ ಸಾಲ ಮಾಡಿದ್ದರು. ಲಾಕ್ ಡೌನ್ ಎದುರಾದ ಸಂಧರ್ಭದಲ್ಲಿ ಹಣ ಸಂಪಾದನೆ ಮಾಡಲು ಅಸಾಧ್ಯವಾದ ಕಾರಣ, ಅವರಲ್ಲಿ ಫೈನಾನ್ಸ್ ಗೆ ಹಣ ಮರು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ನಿರಂತರವಾಗಿ ಫೈನಾನ್ಸ್ ನಿಂದ ಹಣಕ್ಕಾಗಿ ನೊಟೀಸ್ ಬರುತ್ತಿರುವ ಕಾರಣ ಬೇಸತ್ತ ಹಕೀಮ್ ತನ್ನ ಮೊಬೈಲ್ ಸಂಖ್ಯೆ ಯೊಂದಿಗೆ ಕಿಡ್ನಿ ಬೇಕಾದವರು ನನ್ನನು ಸಂಪರ್ಕಿಸಿ ಎಂದು ಎಲ್ಲೆಡೆ ಶೇರ್ ಮಾಡಿದ್ದರು.
ಈ ಕುರಿತು ನ್ಯೂಸ್ ಮಲ್ನಾಡ್, ಚಾಲಕ ಹಕೀಮ್ ರನ್ನು ಸಂಪರ್ಕಿಸಿದಾಗ, ನಾನು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ, ನನ್ನ ಬಳಿ ವಾಹನದ ಮೇಲೆ ಮಾಡಿದ್ದ ಸಾಲವನ್ನು ತೀರಿಸಲು ಹಣವಿಲ್ಲ, ಲಾಕ್ ಡೌನ್ ಅವಧಿಯಲ್ಲಿ ನಿಂತಿದ್ದ ಗಾಡಿಯ ಇಂಜಿನ್ ಸಂಪೂರ್ಣವಾಗಿ ಹದಗೆಟ್ಟಿದೆ. ಅದನ್ನು ಸರಿ ಪಡಿಸಲು 70 ಸಾವಿರ ಆಗುತ್ತದೆ ಆದರೆ ವಾಹನವನ್ನು ಸರಿಮಾಡಿಸಲು ನನ್ನ ಬಳಿ ಹಣವಿಲ್ಲ, ಆದ ಕಾರಣ ಕಿಡ್ನಿ ಮಾರಿ ಹಣ ಸಂಪಾದನೆ ಮಾಡಲು ಮುಂದಾಗಿದ್ದೇನೆ ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.




0 Comments