ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಶಾಸಕರಾದ ಸಿ.ಟಿ ರವಿ ಅವರ 54ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಂದು ಜಿಲ್ಲಾ ಯುವ ಮೋರ್ಚಾ ವತಿಯಿಂದ ತುಳಸಿ ಗಿಡ ಹಾಗೂ ವಿವಿಧ ರೀತಿಯ ಹೂವಿನ ಗಿಡಗಳ ವಿತರಣಾ ಕಾರ್ಯಕ್ರಮವನ್ನು ಚಿಕ್ಕಮಗಳೂರಿನ ವಿವಿಧ ಭಾಗದಲ್ಲಿ ಮಾಡಲಾಗಿದೆ.
ಈ ಸಂಧರ್ಭದಲ್ಲಿ ಸಿಡಿಎ ಮಾಜಿ ಅಧ್ಯಕ್ಷರಾದ ರಾಜಪ್ಪ, ಬಿಜೆಪಿ ಮುಖಂಡರಾದ ಮಹೇಶ್, ಉಮೇಶ್, ಗಿರೀಶ್, ಯುವ ಮೋರ್ಚಾದ ಕಾರ್ಯಕರ್ತರಾದ ಪ್ರಶಾಂತ್, ದರ್ಶನ್, ಶ್ಯಾಮ್ ವಿ ಗೌಡ, ಗೌತಮ್ ಹಾಗೂ ಎಬಿವಿಪಿಯ ಕಾರ್ಯಕರ್ತರಾದ ಗುರು, ವಿಶ್ವ ಹಿಂದೂ ಪರಿಷತ್ ನ ಮುರುಳೀಧರ ಕಿಣಿ, ಪ್ರದೀಪ್ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ತುಳಸಿ ಗಿಡದಲ್ಲಿ ಅನೇಕ ಔಷದೀಯ ಗುಣಗಳಿವೆ. ಅದು ದೇಹಕ್ಕೆ ತಗಲುವ ಅನೇಕ ಸೋಂಕನ್ನು ನಿವಾರಿಸುತ್ತದೆ. ಸಣ್ಣ ಪುಟ್ಟ ಖಾಯಿಲೆಗಳು ಬಂದಾಗ ಮನೆ ಔಷಧಕ್ಕೂ ತುಳಸಿ ಬೇಕೇ ಬೇಕು. ತುಳಸಿ ಗಿಡವನ್ನು ಕೇವಲ ಧಾರ್ಮಿಕ ಕಾರಣಗಳಿಗಷ್ಟೇ ನಡಬೇಕೆಂದಿಲ್ಲ ಅದಕ್ಕೆ ವೈದ್ಯಕೀಯ ಹಾಗೂ ವೈಜ್ಞಾನಿಕ ಕಾರಣವೂ ಇವೆ. ಹಾಗಾಗಿ ನಮ್ಮ ಜನಪ್ರಿಯ ಶಾಸಕರಾದ ಸಿ.ಟಿ ರವಿ ಅವರ ಜನ್ಮ ದಿನದಂದು ತುಳಸಿ ಗಿಡಗಳನ್ನು ವಿತರಿಸಿದ್ದೇವೆ. - ಸಂತೋಷ್ ಕೋಟ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಯುವ ಮೋರ್ಚಾ, ಚಿಕ್ಕಮಗಳೂರು
ಇನ್ನು ಚಿಕ್ಕಮಗಳೂರು ನಗರದ ಬಾಲಮಂದಿರದಲ್ಲಿ ಅನಾಥ ಮಕ್ಕಳಿಗೆ ಕ್ರೀಡಾ ಸಾಮಾಗ್ರಿಗಳನ್ನು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ಯತೀಶ್ ಇಂದವರ ಅವರ ನೇತೃತ್ವದಲ್ಲಿ ನೀಡಲಾಗಿದೆ. ಈ ಸಂಧರ್ಬದಲ್ಲಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿಗಳಾದ ಸಂದೀಪ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಹಾಗೂ ಪದ್ಮನಾಭ ಉಪಸ್ಥಿತರಿದ್ದರು.
ಶೃಂಗೇರಿಯಲ್ಲಿ ಸಿ.ಟಿ ರವಿ ಹೆಸರಲ್ಲಿ ಕಾರ್ಯಕರ್ತರಿಂದ ಸೇವೆ
ಸಿ.ಟಿ ರವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಶೃಂಗೇರಿಯಲ್ಲೂ ಯುವ ಮೋರ್ಚಾ ಕಾರ್ಯಕರ್ತರು ಶಾಸಕ ಸಿ.ಟಿ ರವಿ ಅವರ ಹೆಸರಿನಲ್ಲಿ ಶಾರದಾಂಬ ದೇವಸ್ಥಾನದಲ್ಲಿ ಸೇವೆ ಮಾಡಿಸಿದ್ದಾರೆ. ಬಳಿಕ ತಾಲೂಕಿನ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು, ಮಾಸ್ಕ್ ಹಾಗೂ ಸ್ಯಾನಿಟೈಝರ್ ನೀಡಿದ್ದಾರೆ. ಈ ಸಂಧರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೇಯಸ್ ರಾವ್ ಕವಿಲುಕುಡಿಗೆ, ಕೊಪ್ಪ ಯುವ ಮೋರ್ಚಾದ ಉಪಾಧ್ಯಕ್ಷ ಸುಭಾಶ್ ಚಂದ್ರ, ಅಡ್ಡಗದ್ದೆ ಗ್ರಾಮ ಪಂಚಾಯತ್ ಸದಸ್ಯ ಹಂಚಲಿ ರಾಘವೇಂದ್ರ ಕಾರ್ಯಕರ್ತರಾದ ಸಚಿನ್, ಉಳುವೆ ವಿಘ್ನೇಶ್ವರ, ಆದಿತ್ಯ ಶ್ರೀನಿವಾಸ್ ರಾವ್ ಇದ್ದರು.




0 Comments