ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ ಎಂಬುದು ದೈನಂದಿನ ಸಮಸ್ಯೆ ಎಂಬಂತಾಗಿದೆ. ಅದರಲ್ಲೂ ಕೊರೋನಾ ಕಾರಣದಿಂದ ಆನ್ಲೈನ್ ಶಿಕ್ಷಣದ ಪರಿಣಾಮ ನೆಟ್ವರ್ಕ್ ಸಿಗದೇ ಹಳ್ಳಿ ಭಾಗದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಕೆಲವರು ಮರ ಹತ್ತಿ ಪಾಠ ಕೇಳಿದರೆ, ಬಸ್ ನಿಲ್ದಾಣದಲ್ಲಿ, ರಸ್ತೆ ಪಕ್ಕದಲ್ಲಿ ಎಲ್ಲಾದರೂ ಕುಳಿತು ಪಾಠ ಕೇಳುವ ಮಕ್ಕಳಿದ್ದಾರೆ.ಇನ್ನೂ ಹಲವು ಭಾಗಗಳಲ್ಲಿ ನೆಟ್ವರ್ಕ್ ಗುಣಮಟ್ಟ ಸಂಪೂರ್ಣ ಕಡಿಮೆ ಇದ್ದು ಮಕ್ಕಳು ವಿದ್ಯೆಯಿಂದಲೇ ವಂಚಿತರಾಗಿದ್ದಾರೆ.
ಇಂದು ತುಮಕಾನೆಯ ಅಮ್ಮ ಫೌಂಡೇಶನ್ ವತಿಯಿಂದ ಎನ್. ಆರ್ ಪುರದ ಮಾಕೋಡು ಸರ್ಕಾರಿ ಪಾಠ ಶಾಲೆಗೆ ಬೂಸ್ಟರ್ ಕೊಡುಗೆ ಯಾಗಿ ನೀಡುವ ಮೂಲಕ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಯಿತು.ವಿದ್ಯಾರ್ಥಿಗಳ ಬಳಕೆಗಾಗಿ ಇಂದು ಅಳವಡಿಸಿ ಚಾಲನೆ ನೀಡಲಾಯಿತು.
ಈ ಕುರಿತು ಮಾತನಾಡಿದ ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಅವರು, ಕರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದಲೂ ರಾಜ್ಯದಲ್ಲಿ ಆನ್ಲೈನ್ ಕ್ಲಾಸ್ ಗಳು ಜಾರಿಯಲ್ಲಿದೆ. ಸರ್ಕಾರಿ ಹಾಗೂ ಖಾಸಗೀ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆಗೀಡಾಗಿದ್ದಾರೆ. ಮಲೆನಾಡಿನ ಹಲವಾರು ಭಾಗಗಳಲ್ಲಿ ವಿದ್ಯುತ್ ಹಾಗೂ ಇಂಟರ್ನೆಟ್ ಸಮಸ್ಯೆ ಇದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಅಮ್ಮ ಫೌಂಡೇಶನ್ ವತಿಯಿಂದ ಬೂಸ್ಟರ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಿದೆ, ವಿದ್ಯಾರ್ಥಿಗಳ ಹಿತ ದೃಷ್ಟಿಯ ಸಲುವಾಗಿ ಅಮ್ಮ ಫೌಂಡೇಶನ್ ಸದಾಕಾಲ ಅಮ್ಮನಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಅಮ್ಮ ಫೌಂಡೇಶನ್ ನ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಅವರು ತಿಳಿಸಿದರು.
ಭಾರತ ದೇಶದ ಅತೀ ಮುಖ್ಯವಾದ ಆಸ್ತಿ ಗ್ರಾಮೀಣ ಯುವಕ ಯುವತಿಯರು,ಭಾರತದಲ್ಲಿ ಸುಮಾರು 23 ಕೋಟಿ ಜನರು 12 ವರ್ಷದಿಂದ 24 ರ ಹರೆಯದವರು. ಮುಖ್ಯವಾಗಿ ಯುವ ಸಮುದಾಯದ ಕುರಿತು ನಾವು ಆಲೋಚಿಸ ಬೇಕಿದೆ. ಎಲ್ಲಾ ವರ್ಗದ ಜನರ ಅಭಿವೃದ್ದಿಯ ಕುರಿತು ಗಮನ ಹರಿಸಬೇಕಾದ ಅವಶ್ಯಕತೆ ಇದೆ.ಆದರೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ಸರಿಯಾದ ಸೌಲಭ್ಯಗಳು ಸಿಗದ ಕಾರಣ ಮತ್ತು ಯೋಜನೆಗಳ ಅರಿವಿಲ್ಲದೆ ತಮ್ಮ ಗುರಿಯನ್ನು ತಲುಪುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.ಭಾರತ ದೇಶದ ಅತೀ ಮುಖ್ಯವಾದ ಆಸ್ತಿ ಗ್ರಾಮೀಣ ಯುವಕ ಯುವತಿಯರು, ಆದರೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ಸರಿಯಾದ ಸೌಲಭ್ಯಗಳು ಸಿಗದ ಕಾರಣ ಮತ್ತು ಯೋಜನೆಗಳ ಅರಿವಿಲ್ಲದೆ ತಮ್ಮ ಗುರಿಯನ್ನು ತಲುಪುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡರು.
ಮಾಕೊಡು ಚರ್ಚ್ ಫಾದರ್ ಕ್ಲೀಟರ್,ಹಾಗೂ ಸ್ಥಳೀಯ ಮುಖಂಡರಾದ ಮಂಜುನಾಥ್ ಹೆಗಡೆ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಅಶ್ವಿನಿ, ಅನಿಲ್, ಮಾಜಿ ಸದಸ್ಯರಾದ ರಘು ಶೆಟ್ಟಿ ಉಪಸ್ಥಿತರಿದ್ದರು.




0 Comments