ಹಳ್ಳಿ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ, ಲಾಕ್ಡೌನ್ ಸಮಯದಲ್ಲಂತೂ ಕಡಿವಾಣವೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು, ಆಗ ಸಾರ್ವಜನಿಕರ ದೂರಿನ ಮೇರೆಗೆ ಮಲೆನಾಡಿನ ಹಲವು ಭಾಗಗಳಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೇಸು ದಾಖಲಿಸಿದ್ದರು.
ಶೃಂಗೇರಿ ತಾಲೂಕಿನ ಕೂತಗೋಡಿನ ಕಿಣಿಕಲ್ ಗ್ರಾಮದ ಹಾಗೂ ತೆಕ್ಕೂರಿನ ಜನರು ಅಕ್ರಮ ಮದ್ಯ ಮಾರಾಟದಿಂದ ಬೇಸತ್ತು, ವಿನೂತನ ಮಾದರಿಯ ಹೋರಾಟಕ್ಕೆ ಮುನ್ನುಡಿ ಇಟ್ಟಿದ್ದಾರೆ.
ಶೃಂಗೇರಿ ತಾಲೂಕು ಗಿಣಿ ಕಲ್ ಸುತ್ತ ಮುತ್ತಲಿನ ಊರಿನ ಗ್ರಾಮಸ್ಥರು ಕಾಲು ನಡಿಗೆಯ ಮೂಲಕ ಅನಧಿಕೃತ ಮದ್ಯ ಮಾರಾಟ ಮಾಡುತ್ತಿರುವವರ ಮನೆ ಮನೆಗೆ ಭೇಟಿ ನೀಡಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಅವರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ, ಅದನ್ನು ಮೀರಿ ಯಾರಾದರೂ ಮತ್ತೆ ಮದ್ಯವನ್ನು ಮಾರಾಟ ಮಾಡಿದ್ದು ಕಂಡುಬಂದಲ್ಲಿ ಉಗ್ರವಾದ ಹೋರಾಟವನ್ನು ಮಾಡುವುದಾಗಿಯೂ ಎಚ್ಚರಿಸಿದ್ದಾರೆ.
ಕರ್ನಾಟಕ ಜನಶಕ್ತಿ ಮುಖಂಡರಾದ ಮನೋಜ್ ನೇತೃತ್ವದಲ್ಲಿರುವ ಇದು ನಡೆದು, ಶೃಂಗೇರಿ ತಾಲ್ಲೂಕಿನ ತೆಕ್ಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ https://forms.gle/hJoKNWwWAXZRZiZF6



0 Comments