ಕೆಲ ದಿನಗಳ ಹಿಂದೆ ಮೂಡಿಗೆರೆಯ ಬಳಿ ನಿರ್ಜನ ಪ್ರದೇಶದಲ್ಲಿ ವಾಹನಗಳನ್ನು ಅಡ್ಡಗಟ್ಟಿ  ಹಣ, ಚಿನ್ನಾಭರಣ, ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಇಂದು ಸುದ್ದಿಗೋಷ್ಠಿ ನಡೆಸಿದರು.ಆರೋಪಿಗಳು ಬರೀ ಈ ಪ್ರಕರಣ ಮಾತ್ರವಲ್ಲದೆ ಇನ್ನಿತರ ಹಲವಾರು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಅಕ್ಷಯ್ ಹಾಕೆ. ಈ ಆರೋಪಿಗಳು ವಾಹನಗಳನ್ನು ಅಡ್ಡಗಟ್ಟಿ ದೋಚುವ ಪ್ರಕರಣ ಮಾತ್ರವಲ್ಲದೆ ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ, ಚಾಕು ಇರಿತ, ದರೋಡೆ, ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. 

ಮೂಡಿಗೆರೆ ಮಾತ್ರವಲ್ಲದೆ ಮಂಡ್ಯ, ಬೀರೂರು, ಚನ್ನರಾಯಪಟ್ಟಣ, ಹಾಸನ, ಮೈಸೂರು, ಬೆಂಗಳೂರು, ಉಡುಪಿ, ಆಲ್ದೂರು, ಹೊಳೆನರಸೀಪುರ ಹೀಗೆ ಮುಂತಾದ ಕಡೆಗಳಲ್ಲಿ ಈ ವ್ಯಕ್ತಿಗಳ ಮೇಲೆ ಹಳೆಯ ದಾಖಲಾದ ಪ್ರಕರಣಗಳು ಇದೆ ಎಂದು ತಿಳಿಸಿದ್ದಾರೆ.

ಆರೋಪಿಗಳಾದ ಮಂಡ್ಯದ ಶಿವಕುಮಾರ್, ಹೊಳೆನರಸೀಪುರದ ಕುಮಾರಸ್ವಾಮಿ, ಬೆಂಗಳೂರಿನ ಅಜಯ್ ಕುಮಾರ್ ಸಿಂಗ್, ಹಾಗೂ ಇನ್ನೊಬ್ಬ ಆರೋಪಿಯಾದ ಮೂಡಿಗೆರೆಯ ತರುವೆ ಗ್ರಾಮದ ಶಿವಕುಮಾರ್,ಈ ಪ್ರಕರಣದ ಇಬ್ಬರು ಆರೋಪಿಗಳು ಹಿಂದೆ ಚಿಕ್ಕಮಗಳೂರಿನ ಕಾರಾಗೃಹ ವಾಸದಲ್ಲಿ ಇದ್ದಾಗ ಪರಿಚಯ ಗೊಂಡು ಸ್ನೇಹ ಬೆಳೆಸಿ ನಂತರ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಇನ್ನೊಬ್ಬ   ತಲೆ ಮರೆಸಿಕೊಂಡು ಆರೋಪಿಯನ್ನಾಗಿ ಎಂದು ಗುರುತಿಸಲಾಗಿದೆ. ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತಿದ್ದ  ಈತ ಮಂಡ್ಯದವನು ಎಂದು ತಿಳಿದು ಬಂದಿದೆ.

ಆರೋಪಿಗಳಿಂದ 7.65 ಎಂ.ಎಂ ನ ಎರಡು ಪಿಸ್ತೂಲ್, ಎರಡು ನಿಜ ಗುಂಡು, ಒಂದು ಡ್ರಾಗರ್, ಟಾರ್ಚ್, ಕಬ್ಬಿಣದ ರಾಡು, ಹತ್ತು ಸಾವಿರ ರು ನಗದು, ಎರಡು ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ, ಮಾರಣಾಂತಿಕ ಆಯುಧಗಳನ್ನು ವಶಪಡಿಸಿಕೊಂಡ ಸಿಪಿಐ ಮೂಡಿಗೆರೆ ಸೋಮಶೇಖರ್ ಜೆ.ಸಿ ಮತ್ತು ಅವರ ತಂಡಕ್ಕೆ ಪೋಲಿಸ್ ಅಧೀಕ್ಷಕರು ಅಭಿನಂದಿಸಿದ್ದಾರೆ. ಹಾಗೂ ಪೋಲಿಸ್ ಮಹಾ ನಿರೀಕ್ಷಕರು ಒಂದು ಲಕ್ಷ ಮೊತ್ತದ ಬಹುಮಾನವನ್ನು ಘೋಷಿಸಿದ್ದಾರೆ.