ನಿನ್ನೆ ತಡರಾತ್ರಿ ಸುಮಾರು 12ರ ಸಮಯದಲ್ಲಿ ತೀರ್ಥಹಳ್ಳಿಯ ಕುಶಾವತಿ ಸೇತುವೆಯ ಹತ್ತಿರ ದನವೊಂದಕ್ಕೆ ಅಪರಿಚಿತ ವಾಹನವೊಂದು ವೇಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಬಹಳ ಗಂಭೀರವಾದ ಗಾಯವಾಗಿರುವ ಘಟನೆ ನಡೆದಿದೆ.

ಅದೇ ದಾರಿಯಲ್ಲಿ ತೆರಳುತ್ತಿದ್ದ ರಾಘವ್ ಹಾಗೂ ಸ್ನೇಹಿತರಿಗೆ ಅದನ್ನು ನೋಡಿ ಹಾಗೆಯೇ ಬಿಟ್ಟು ಹೋಗಲು ಮನಸ್ಸಾಗದೇ ಸಹಾಯಕ್ಕೆಂದು ತಕ್ಷಣವೇ ಬಜರಂಗದಳದ ಕಾರ್ಯಕರ್ತರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಬಜರಂಗದಳದ ಕಾರ್ಯಕರ್ತರಾದ ಗಣೇಶ್ ಪ್ರಸಾದ್, ಗಣೇಶ್, ಶಶಿ ಕುಂದರ್ , ವಿಘ್ನೇಶ್ ಕಾಮತ್  ಹಾಗೂ ಇತರರು ಸಹಾಯಕ್ಕೆ ಸ್ಥಳಕ್ಕೆ ಧಾವಿಸಿ ದನದ ಆರೈಕೆ ಮಾಡಿದ್ದಾರೆ. 

ಗಾಯಗಳಿಗೆ ಪ್ರಥಮ ಚಿಕಿತ್ಸೆ ಮಾಡಿದ ನಂತರ ಅದಕ್ಕೆ ಬಹಳಷ್ಟು ಒಳ ಪೆಟ್ಟುಗಳು ಬಿದ್ದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದರಿಂದ ವೈದ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ತಡ ರಾತ್ರಿ ಆಗಿದ್ದರಿಂದ ಯಾವ ಡಾಕ್ಟರ್ ಗಳೂ ಲಭ್ಯವಿರಲಿಲ್ಲ ಬಹಳಷ್ಟು ಪ್ರಯತ್ನಗಳ ನಂತರ ಕಮ್ಮರಡಿ ಹಾಗೂ ದೇವಂಗಿ ವಿಭಾಗದ ಡಾಕ್ಟರ್ ಅರವಿಂದ್ ಅವರು ವಿಷಯ ತಿಳಿದ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡಿ ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ. ದನದ ಬೆನ್ನುಮೂಳೆಗೆ ಬಹಳಷ್ಟು ಪೆಟ್ಟು ಬಿದ್ದಿದ್ದು ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾದ ಹೊಡೆತ ಬಿದ್ದಿರುತ್ತದೆ ಅದಕ್ಕಾಗಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಮುಂದಿನ ಚಿಕಿತ್ಸೆಗಾಗಿ ಅದನ್ನು ರಾಘವ್ ಅವರ ಮನೆಗೆ ಕರೆದೊಯ್ಯಲಾಗಿದೆ.