ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಬಳಿ ಸೇರಿದ ಅಖಿಲ ಭಾರತ ವೀರಶೈವ ಮಹಾಸಭೆ, ನಗರ ಮತ್ತು ತಾಲೂಕು ವೀರಶೈವ ಮಹಾಸಭಾ ಮುಖಂಡರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪೂರ್ಣ ಅವಧಿಗೆ ಮುಂದುವರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. 

ಜನರನ್ನ ಉದ್ದೇಶಿಸಿ ಮಾತನಾಡಿದ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಶಿವಶಂಕರ್ ಕೇಂದ್ರ ಸರ್ಕಾರದ ನಿಲುವು ಸರಿಯಿಲ್ಲ, ಕೋರೋನ, ಪ್ರವಾಹದಂತ ಪ್ರಸಕ್ತ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಸರಿಯಲ್ಲ ಎಂದರು,  

ವೀರಶೈವ ಸ್ವಾಮೀಜಿಗಳ ಅವಹೇಳನ ಮಾಡುತ್ತಿರುವುದು ಖಂಡನೀಯ ಯಡಿಯೂರಪ್ಪ ಎಲ್ಲ ಜಾತಿ, ವರ್ಗಗಳ ಅಧಿನಾಯಕ - ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಓಂಕಾರಸ್ವಾಮಿ

ಯಡಿಯೂರಪ್ಪ ಉತ್ತಮ ಆಡಳಿತಗಾರ ಅವರನ್ನೇ ಮುಂದುವರಿಸಬೇಕು. ಕೇಂದ್ರದ ನಾಯಕರು ನಮ್ಮ ಮನವಿ ಪುರಸ್ಕರಿಸುವ ನಂಬಿಕೆ ಇದೆ - ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸೋಮಶೇಖರ್.

ಯಡಿಯೂರಪ್ಪ ಅವರು ಕೆಳಮಟ್ಟದಿಂದ ಪಕ್ಷ ಸಂಘಟಿಸಿದ ನಾಯಕ ಅವರ ಹೆಸರಲ್ಲಿ ಚುನಾವಣೆಗೆ ಹೋಗುವುದು ವಾಡಿಕೆ ಆಗಿದೆ ಈಗಿರುವಾಗ ಅವರನ್ನು ತೆಗೆಯುವುದು ಎಷ್ಟು ಸೂಕ್ತ - ಬಿಜೆಪಿ ಮುಖಂಡ ನಿರಂಜನ್

ವೀರಶೈವ ಸಮಾಜದ ಮುಖಂಡರಾದ ಶಿವಾನಂದ ಸ್ವಾಮಿ, ರುದ್ರೇಗೌಡ, ಬಾಬು, ಮುರುಗೆಂದ್ರ ಸ್ವಾಮೀ, ಆಶೋಕ್, ನಂಜೇಗೌಡ, ಪೂರ್ಣೇಶ್, ವೀರೇಶ್, ನಿಶಾಂತ್, ಹೇಮಂತ್ ಕುಮಾರ್, ಚಂದ್ರಣ್ಣ ನಂದೀಶ್ ,ಶಿವು, ಮನೂ, ರವೀಶ್ ಬಸಪ್ಪ ಹಾಗೂ ಇತರೆ ಕಾರ್ಯಕರ್ತರು ಇದ್ದರು.