ಶೃಂಗೇರಿ: ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಮೇಲೆ ರಾತ್ರಿ ಸಮಯದಲ್ಲಿ  ಆಸಿಡ್ ದಾಳಿ ನಡೆಸಿದ್ದ ಆರೋಪಿಗಳಿಗೆ ಕಠಿಣ ಶಿಕ್ಷೆ  ಜರುಗಿಸುವಲ್ಲಿ ಯಶಸ್ವಿಯಾಗಿ ವಾದ ಮಂಡಿಸಿದ ಸರ್ಕಾರಿ ವಕೀಲೆ ಮಮತಾ ಬಿ.ಎಸ್ ಅವರನ್ನು ಸನ್ಮಾನ ಮಾಡಲಾಯಿತು.


visitwww.kavyaherbaloil.com

ಸರ್ಕಾರಿ ಅಭಿಯೋಜಕ ರಾದ ಮಮತಾ ರವರು ಈ ಕೇಸ್ ನ ಸಂತ್ರಸ್ತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಖ್ಯವಾದ ಪಾತ್ರ ವಹಿಸಿದ್ದರು. 2015 ರಿಂದ ಇತ್ತೀಚಿನ ತೀರ್ಪು ಪ್ರಕಟವಾಗುವ ವರೆಗೂ ಅವರು ನಡೆಸಿದ ಕಾರ್ಯ ವೈಖರಿಗೆ ಸಮ್ಮತವಾಗಿ ನ್ಯಾಯ ದೊರಕಿದೆ ಎಂಬುದು ಎಲ್ಲೆಡೆ ಕೇಳಿ ಬರುತ್ತಿದೆ.

ಮುಂದಿನ ದಿನಗಳಲ್ಲಿ ಈ ರೀತಿಯ ಕೆಟ್ಟ ಕೆಲಸ ಮಾಡುವ ವ್ಯಕ್ತಿಗಳಿಗೆ ಇದೊಂದು ನಿದರ್ಶನ ವಾಗಲಿದೆ ಎಂದು ಮಮತಾ ರವರು ತಿಳಿಸಿದ್ದಾರೆ.