ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಅಣ್ಣೆಗೆರೆ ಎಂಬ ಬರಪೀಡಿತ ಗ್ರಾಮದಲ್ಲಿರುವಂತಹ ಬ್ಯಾಂಕ್ ಒಂದನ್ನು ಮಾದರಿ ಶಾಖೆಯನ್ನಾಗಿ ರೂಪಿಸಿದ ಹೆಗ್ಗಳಿಕೆಗೆ ಮಲೆನಾಡಿನ ರಘುನಂದನ್ ಅವರು ಪಾತ್ರರಾಗಿದ್ದಾರೆ.
ಜಿಲ್ಲಾಮಟ್ಟದಲ್ಲಿ ಲೆಕ್ಕಕ್ಕುಂಟು ಜಮಕ್ಕಿಲ್ಲ ಎನ್ನುವ ಹಾಗಿದ್ದ ಬ್ಯಾಂಕನ್ನು ತಮ್ಮ ಪ್ರಾಮಾಣಿಕತೆಯ ಕೆಲಸದಿಂದ ಉತ್ತಮ ಶಾಖೆಯನ್ನಾಗಿಸಿದ್ದಾರೆ, ಸತತ ಮೂರು ವರ್ಷಗಳಿಂದ ಕೆಲಸ ನಿರ್ವಹಿಸಿರುವ ಇವರು ಪ್ರಾಮಾಣಿಕತೆ, ತಾಳ್ಮೆ, ಪ್ರೀತಿಯೆಂಬ ಅಸ್ತ್ರಗಳಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಕೃಷಿಯ ಹೊಸ ಮಾದರಿಗಳನ್ನು ಜನರಿಗೆ ತಿಳಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಬ್ಯಾಂಕ್ ಮಾತ್ರವಲ್ಲದೆ ಹೊರಗೂ ಅನೇಕ ಯುವಕರಿಗೆ ಸ್ಪೂರ್ತಿಯಾಗಿ ಬೆಂಬಲಿಗರಾಗಿ ನಿಂತಿದ್ದಾರೆ.
ಇವರ ಬೀಳ್ಕೊಡುಗೆ ಸಮಾರಂಭದ ಸಂದರ್ಭದಲ್ಲಿ ನಿಜಕ್ಕೂ ಹೆಮ್ಮೆ ಎನಿಸುತ್ತದೆ, ಒಬ್ಬ ಬ್ಯಾಂಕ್ ಮ್ಯಾನೇಜರ್ ಆದವರು ಹೇಗಿರಬೇಕು ಹೇಗಿದ್ದರೆ ಚನ್ನಾಗಿರುತ್ತದೆ ಎಂದು ಇಂದು ಅರ್ಥವಾಗಿದೆ. ಇಡೀ ಊರಿನ ಜನ ಬಂದು ಕಣ್ಣೀರಿಟ್ಟು ಬೀಳ್ಕೊಡುವ ಸಮಾರಂಭಕ್ಕೆ ಸಾಕ್ಷಿಯಾಗುವ ಯೋಗ ನನ್ನದಾಯಿತು ಬಯಲು ಸೀಮೆಯ ಜನರ ಮಧ್ಯೆ ಮಲೆನಾಡಿನೊಬ್ಬನ ಸಾಧನೆ ಸಣ್ಣದೇನಲ್ಲ ಎಂದು ಹೇಳಿದರು.




0 Comments