ಖಾಂಡ್ಯ ಹೋಬಳಿಯ ದೇವದಾನ ಗ್ರಾಮಕ್ಕೆ ಸೇರಿದ ವಿಜಯಗಿರಿ ಎಸ್ಟೇಟ್ ಗೆ ಹೋಗುವ ಮಾರ್ಗದಲ್ಲಿ ಅಕ್ರಮವಾಗಿ ಹಸುವನ್ನು ಕೊಂದ ಪಾಪಿಗಳು ಆಟೋದಲ್ಲಿ ಹಸುವಿನ ಮಾಂಸವನ್ನು ಮಾರಲು ಮುಂದಾಗಿದ್ದಾರೆ,   ಈ ವಿಷಯವನ್ನರಿತ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ, ಈ ಮಾಹಿತಿಯನ್ನು ಆಧರಿಸಿ ಧಾವಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ ಇಬ್ಬರು ಆರೋಪಿಗಳಾದ ಕಡ್ಲೆ ಮಸ್ಕಿ ವಾಸಿ ಇಬ್ರಾಹಿಂ ಮತ್ತು ಶರೀಫ್ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ, ಮತ್ತು ಈ ಕೃತ್ಯಕ್ಕೆ ಬಳಸಿ ಕೊಂಡ ಕೆ. ಎ. 18. ಬಿ 8209 ನಂಬರಿನ ಆಟೋವನ್ನು ಹಾಗೂ ಗೋಮಾಂಸ ವನ್ನು ಸಾಕ್ಷಿ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

ಮಲೆನಾಡಿನ ಭಾಗದಲ್ಲಿ ಎಗ್ಗಿಲ್ಲದೆ ಗೋಮಾಂಸದ ದಂಧೆಯು ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ಈ ರೀತಿಯ ದುಷ್ಕೃತ್ಯ ಸಾಗಿದೆ. ಈ ಕೃತ್ಯಕ್ಕೆ ಭಾಗಿಯಾದವರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ