ಹಾಸನದಲ್ಲಿ ಮತ್ತೆ ಬಂದೂಕು ಸದ್ದು ಮಾಡಿದ್ದು, ಗುಂಡಿನ ದಾಳಿಗೆ ಯುವಕ ಬಲಿಯಾಗಿದ್ದಾನೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕಲ್ಲಹಳ್ಳಿ ಫಾರೆಸ್ಟ್ ನಲ್ಲಿ ಘಟನೆ ನಡೆದಿದ್ದು, ಬೇಲೂರು ತಾಲ್ಲೂಕಿನ ಕುಶಾವರ ಗ್ರಾಮದ ಮಧು(24) ಮೃತ ಯುವಕ.
ನೆನ್ನೆ ಸ್ನೇಹಿತರ ಜೊತೆಗೆ ತೆರಳಿದ್ದ ಮಧು ಸಂಜೆ ಗುಂಡಿನ ದಾಳಿಗೊಳಗಾಗಿ ಸಾವನ್ನಪ್ಪಿದ್ದಾನೆ.ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಧುನನ್ನು ಹಾಸನದ ಖಾಸಗೀ ಆಸ್ಪತ್ರೆಗೆ ದಾಖಲಿಸಿದ ಸ್ನೇಹಿತರು ಆನಂತರ ಎಸ್ಕೇಪ್ ಆಗಿದ್ದರು.
ಯುವಕ ಮಧು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ
ಈ ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಿದ್ದಾರೆ. ಅರಣ್ಯಕ್ಕೆ ಬೇಟೆಗೆ ತೆರಳಿದಾಗ ಮಿಸ್ ಫೈರ್ ಆಗಿದೆಯಾ, ಅಥವಾ ಕೊಲೆಯಾ ಎಂಬ ಸಂಶಯದ ಬಗ್ಗೆ ಇನ್ನೂ ನಿರ್ಧಾರಕ್ಕೆ ಬರಲಾಗಿಲ್ಲ.ಸಧ್ಯ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.



0 Comments