ಕಳೆದೆರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹಲವಾರು ದುರ್ಘಟನೆಗಳು ಸಂಭವಿಸುತ್ತಿದೆ.  

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ: https://forms.gle/hJoKNWwWAXZRZiZF6

ಮಳೆಯ ಅಬ್ಬರಕ್ಕೆ  ಹಲವು ಕಡೆ ಸೇತುವೆ ಕುಸಿದಿದೆ, ಮರಗಳು ರಸ್ತೆ ಮೇಲೆ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನೂ ಹಲವಾರು ರೀತಿಯ ಅವಾಂತರ ಸೃಷ್ಟಿಯಾಗಿದೆ. 
ಸಧ್ಯ ರೆಡ್ ಅಲರ್ಟ್ ಸಹ ಘೋಷಿಸಲಾಗಿದ್ದು, ಜಾಗರೂಕತೆಯಿಂದ ಇರುವಂತೆ ಜನರಿಗೆ ಎಚ್ಚರಿಕೆ ಸಹ ನೀಡಲಾಗಿದೆ.
ಹೀಗಿರುವಾಗ ಚಿಕ್ಕಮಗಳೂರು ತಾಲೂಕಿನ ಕ್ಯಾತನ ಬೀಡು ಗ್ರಾಮದ ಬಸವೇಗೌಡ ಎಂಬುವವರ ಮನೆಯ ಕೊಟ್ಟಿಗೆ ಕುಸಿದ ಪರಿಣಾಮ ಸ್ಥಳದಲ್ಲೇ ಬಸವೇಗೌಡ ಅವರು ಸಾವನ್ನಪ್ಪಿದ್ದಾರೆ. ಕೊಟ್ಟಿಗೆಯಲ್ಲಿ ಇದ್ದ 1 ಎತ್ತು ಸಹ ಮರಣ ಹೊಂದಿದೆ. ಬಸವೇಗೌಡ ಅವರ ಜೊತೆಯಲ್ಲೇ ಇದ್ದ ಮೊಮ್ಮಗ ಅದೃಷ್ಟವಶಾತ್ ಜೀವಂತವಾಗಿ ಪಾರಾಗಿದ್ದಾನೆ.ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಪರಿಹಾರ ಕಾರ್ಯ ಕೈಗೊಂಡಿದ್ದಾರೆ.