ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಬೃಹತ್ ಪ್ರತಿಮೆಯೊಂದು ನಿರ್ಮಾಣಗೊಳ್ಳಲಿದೆ.
ಈ ಕಾಯಕಕ್ಕೆ ಬೇಕಾಗುವ ಶಿಲೆಯನ್ನು ಆಂಧ್ರಪ್ರದೇಶದ ಕಲ್ಲುಕ್ವಾರಿ ಯಿಂದ ಮಠದ ಆವರಣಕ್ಕೆ ತರಲಾಗಿದೆ, ಸೆಪ್ಟೆಂಬರ್ 10 ನೇ ತಾರೀಖಿನಂದು ಆಂಧ್ರಪ್ರದೇಶದ ಮಡಕಶಿರಾ ಕಲ್ಲು ಕ್ವಾರಿಯಿಂದ ಹೊರಟ ಟ್ರಕ್ 06 ದಿನಗಳ ನಂತರ ಬಾಳೆಹೊನ್ನೂರು ರಂಭಾಪುರಿ ಮಠದ ಆವರಣಕ್ಕೆ ಬಂದು ತಲುಪಿದೆ.
ಈ ಬೃಹತ್ ಶಿಲೆಯ ಸಾಗಾಣಿಕೆಗೆ ನೂರು ಚಕ್ರದ ಲಾರಿಯನ್ನು ಬಳಸಿಕೊಂಡು ಸಾಗಾಣಿಕೆ ಕಾರ್ಯ ಮಾಡಲಾಗಿದೆ. ಶಿಲೆಯು 100 ಟನ್ ತೂಕ ಹಾಗೂ 20 ಅಡಿಗಳಷ್ಟು ಉದ್ದವಿದೆ. ಈ ಶಿಲೆಯ ಸಾಗಾಣಿಕೆಗೆ 12 ಕಾರ್ಮಿಕರು ತೊಡಗಿಕೊಂಡಿದ್ದರು, ಯಂತ್ರೋಪಕರಣಗಳ ಸಹಾಯದಿಂದ ಮತ್ತು ಕಾರ್ಮಿಕರನ್ನು ಸಹ ಬಳಸಿಕೊಂಡು ಶಿಲೆಯ ಲೋಡ್ ಮತ್ತು ಅನ್ಲೋಡ್ ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ಶ್ರೀಧರ ಬಾಬು ಅವರು ತಿಳಿಸಿದ್ದಾರೆ. ಅಂದಾಜು 8 ಕೋಟಿಗೂ ಅಧಿಕ ಮೌಲ್ಯದ ಮೊತ್ತದಲ್ಲಿ ಬೃಹತ್ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಬೃಹತ್ ಶಿಲೆಯ ಸಾಗಾಟದ ಜವಾಬ್ದಾರಿಯನ್ನು ಬೆಂಗಳೂರು ಮೂಲದ ಶ್ರೀಧರ ಬಾಬು ಅವರು ವಹಿಸಿಕೊಂಡಿದ್ದಾರೆ.


0 Comments