ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಬಣಕಲ್ ಉರಗ ತಜ್ಞ ಸ್ನೇಕ್ ಆರಿಫ್ ಸೆರೆಹಿಡಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಹ್ಯಾರ್ ಗುಡ್ಡೆ ಪ್ರಕಾಶ್ ಎಂಬುವವರ ಗದ್ದೆಯಲ್ಲಿ ಮಲಗಿದ್ದ ಬೃಹತ್ 12 ಅಡಿ ಕಾಳಿಂಗ ಸರ್ಪವನ್ನು ನೋಡಿ ಭಯಗೊಂಡು ಉರಗ ತಜ್ಞರಿಗೆ ವಿಷಯವನ್ನು ತಿಳಿಸಿದ್ದಾರೆ 

ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಆ ಹಾವನ್ನು ಸೆರೆಹಿಡಿದು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಚಾರ್ಮಾಡಿ ಘಾಟ್ ನ  ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಮಲೆನಾಡು ಭಾಗದಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತದೆ. ದಟ್ಟ ಅರಣ್ಯ ಪ್ರದೇಶವಾದ್ದರಿಂದ ಹಾವುಗಳು ಕಾಡಿನಲ್ಲಿಯೇ ನೆಲೆಯೂರಿರುತ್ತವೆ, ಆಹಾರವನ್ನರಸಿ ಬೇರೆ ಬೇರೆ ಸ್ಥಳಗಳಿಗೆ ಧಾವಿಸುತ್ತದೆ ಎಂದು ಉರಗ ತಜ್ಞ ಆರೀಫ್ ಹೇಳಿದ್ದಾರೆ.

 ತನು ಕೊಟ್ಟಿಗೆಹಾರ ವರದಿಗಾರರು.