ಹಾಸನ : ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚು ಹಾಲನ್ನು ಉತ್ಪಾದಿಸುವ ಯೋಜನೆಯನ್ನು ದೇಶದ ಪ್ರತಿಷ್ಠಿತ ಹಾಲು ಉತ್ಪಾದನಾ ಘಟಕ ನಂದಿನಿ ತಯಾರು ಮಾಡಿಕೊಂಡಿದೆ.
167 ಕೋಟಿ ರೂಪಾಯಿ ವೆಚ್ಚದ ಮೌಲ್ಯದಲ್ಲಿ ಈ ಘಟಕವು ಸಿದ್ಧವಾಗಿದೆ. ಅಕ್ಟೋಬರ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದ್ದು, ಪ್ರಸ್ತುತ ಪ್ರಾಯೋಗಿಕ ಚಾಲನೆ ನೀಡಲಾಗಿದೆ.
ಈ ಯೋಜನೆಗೆ ಕಳೆದ ವರ್ಷವೇ ಚಾಲನೆ ದೊರೆಯಬೇಕಿತ್ತು, ಆದರೆ ಕೊರೋನ ಹೆಮ್ಮಾರಿ ದೇಶವನ್ನೇ ಆಕ್ರಮಿಸಿದ ಕಾರಣ ಚಾಲನೆ ದೊರೆತಿರಲಿಲ್ಲ. ಇದೀಗ ಸಕಲ ಸಿದ್ಧತೆಗಳು ನಡೆದಿದ್ದು ಮುಂದಿನ ತಿಂಗಳಿನಿಂದ ಕಾರ್ಯಾರಂಭ ಆಗಲಿದೆ. ಪ್ರತೀ ಗಂಟೆಗೆ ಮೂವತ್ತು ಸಾವಿರ ಬಾಟಲ್ನಂತೆ ದಿನಕ್ಕೆ 5 ಲಕ್ಷದ 40 ಸಾವಿರ ಬಾಟಲ್ ಹಾಲು ತಯಾರಾಗಲಿದೆ. ಬಾದಾಮ್ ಮಿಲ್ಕ್, ಪಿಸ್ತಾ, ಸ್ಟ್ರಾಬೆರಿ, ವೆನಿಲ್ಲಾ, ಕಾರಾಮೆಲ್, ಬನಾನ, ಮ್ಯಾಂಗೋ, ಪೆಪ್ಪರ್, ಚಾಕೋ, ಕೇಸರ್, ಸೋಯಾ ಹೀಗೆ ಹತ್ತಾರು ಫ್ಲೇವರ್ಗಳಲ್ಲಿ ಸುವಾಸಿತ ಹಾಲು ಉತ್ಪಾದನೆಯಾಗಿ ಬಾಟಲ್ ಸೇರಲಿದೆ. ಹೊಸ ಆವಿಷ್ಕಾರಗಳೊಂದಿಗೆ ಉತ್ತಮ ಪ್ರಗತಿ ಹೊಂದಿ ಹೈನುಗಾರಿಕೆ ನಂಬಿರುವ ರೈತರಿಗೆ ಪೂರಕವಾಗುವ ಬೆಲೆ ಸಿಕ್ಕರೆ ರೈತನ ಜೀವನ ಕೂಡ ಪ್ರಗತಿಯಾಗುತ್ತದೆ.
ಈ ಘಟಕದಿಂದ ಬಂದ ಲಾಭವನ್ನು ಯಾವುದಾದರೂ ರೂಪದಲ್ಲಿ ರೈತರಿಗೆ ಸಿಗುವಂತೆ ಮಾಡಲಾಗುತ್ತದೆ ,ರೈತರ ಜೀವನವನ್ನು ಇನ್ನಷ್ಟು ಉತ್ತೇಜನ ಗೊಳಿಸಲಾಗುತ್ತದೆ ಎಂದು ಘಟಕದ ವತಿಯಿಂದ ತಿಳಿಸಲಾಗಿದೆ.




0 Comments