ಚಿಕ್ಕಮಗಳೂರು : ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಮಲೆನಾಡಿನ ಭಾಗದಲ್ಲಿ ಹೆಚ್ಚಾಗಿ ಅವಲಂಬಿತವಾಗಿರುವ ಕೃಷಿ ಯಾದ ಕಾಫಿಯು ನೆಲಕಚ್ಚಿದೆ.ಕಾಫಿ ಬೆಳೆ ಸಿಗುವ ಈ ಸಂದರ್ಭದಲ್ಲಿ ಅತಿಯಾಗಿ ಮಳೆಯಾಗುತ್ತಿರುವ ಕಾರಣ ಕಾಫಿ ಹಣ್ಣಾಗಿ ನೆಲಕ್ಕೆ ಉದುರುತ್ತಿದ್ದು ಮಲೆನಾಡಿನ ರೈತರು ಕಂಗಾಲಾಗಿದ್ದಾರೆ. ಕಾಫಿ ಬೆಳೆಗಾಗಿ ವರ್ಷವಿಡಿ ರೈತರು ಖರ್ಚು ಮಾಡಿದ ಹಣವು ನಷ್ಟವಾಗಿದೆ. ಖರ್ಚಾದ ಹಣವು ವಾಪಸ್ ಬರುವ ಯಾವುದೇ ಸಂಭವಗಳಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ.

ಇನ್ನೊಂದೆಡೆ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರ್ ಸಮೀಪದ ಹಳ್ಳಿಯಲ್ಲಿ ಮಕ್ಕಳೇ ಪರಿಸರ ಸ್ನೇಹಿಯಾದ ಗಣೇಶನನ್ನು ನಿರ್ಮಿಸಿದ್ದಾರೆ. ಆ ಮುದ್ದಾದ ಗಣಪನಿಗೆ ಕಾಫಿ ಹಣ್ಣಿನಲ್ಲಿ ಆಕರ್ಷಕವಾದ ಹಾರವನ್ನು ತಯಾರಿಸಿ ಹಾಕಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಕಾಫಿ ಬೆಳೆಗೆ ಯಾವುದೇ ರೀತಿಯ ರೋಗ ಬರಬಾರದು ಹಾಗೂ ಉತ್ತಮ ಬೆಲೆ ದೊರಕಲಿ ಎಂದು ದೇವ ಗಣೇಶನಲ್ಲಿ ಮುಗ್ಧ ಮನಸ್ಸುಗಳು ಪ್ರಾರ್ಥನೆ ಸಲ್ಲಿಸಿದವು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾದ ಶಶಿ ಆಲ್ದೂರು, ಪುನೀತ್, ಸಂಕೇತ್, ಚಂದ್ರು, ಪವನ್, ಪ್ರೇಕ್ಷಿತ್ ಮತ್ತಿತರ ಊರಿನ ಗ್ರಾಮಸ್ಥರು ಹಾಜರಿದ್ದರು.