ತೀರ್ಥಹಳ್ಳಿ : ಮೀನು ಹಿಡಿಯಲು ಹೋದ ಬೆಸ್ತರಿಗೆ ನವಜಾತ ಶಿಶುವೊಂದು ದೊರೆತ ಘಟನೆ ತೀರ್ಥಹಳ್ಳಿಯ ಮಂಡಗದ್ದೆಯಲ್ಲಿ ನಡೆದಿದೆ.

ಮಗುವೊಂದು ದೊರೆತಿದೆ ಎಂದು ಮಂಡಗದ್ದೆಯ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮೃತ ಹೊಂದಿದ ಸ್ಥಿತಿಯಲ್ಲಿ ಮಗು ಪತ್ತೆಯಾಗಿದೆ. 

ಆ ಪುಟ್ಟ ಮೃತ ಶರೀರವನ್ನು ಶವಾಗಾರದಲ್ಲಿರಿಸಿ, ಮರಣೋತ್ತರ ಪರೀಕ್ಷೆ ನಡೆಸಿ ನಂತರದಲ್ಲಿ ಮಗುವಿನ ಅಂತ್ಯಸಂಸ್ಕಾರವನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗಳೇ ನಡೆಸಿ ಮಾನವೀಯತೆ ಮೆರೆದಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಹಂತದ ತನಿಖೆಯನ್ನು  ಆರಂಭಿಸಿದ್ದಾರೆ.