ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಮೋದಿಯವರನ್ನು ಹಾಡಿ ಹೊಗಳಿದ್ದಾರೆ.

ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು, ಇವರು ಕೇವಲ ವ್ಯಕ್ತಿಯಲ್ಲ ಇವರು ಒಂದು ಮಹಾನ್ ಶಕ್ತಿ, ಮೋದಿಯವರು ಯಾರ ಹೆಗ್ಗಳಿಕೆಗೂ ಹಿಗ್ಗದೆ, ತೆಗಳಿಕೆಗೂ ಕುಗ್ಗದೆ ಅವರು ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಜನರ ಉಜ್ವಲ ಭವಿಷ್ಯಕ್ಕಾಗಿ, ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಾಡಿಗೆ ಅನ್ನವನ್ನು ನೀಡುವ ರೈತರ ಬಾಳನ್ನು ಉಜ್ವಲಗೊಳಿಸಲು ಕೃಷಿ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬದಲಾವಣೆ ತರುವ ಕೆಲಸ ಮಾಡುತ್ತಿದ್ದಾರೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ವಿಶಿಷ್ಟವಾದ ರೀತಿಯಲ್ಲಿ ಭಾರತೀಯ ಸಂಸ್ಕೃತಿ ಉಳಿದು ಹಾಗೂ ಎತ್ತರಕ್ಕೆ ಬೆಳೆಯಲು ಅವರು ಕೈಗೊಂಡಿರುವ ನಿರ್ಣಯಗಳು ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದರು.

ಈ ನಾಡಿನಲ್ಲಿ ಎಲ್ಲಾ ವರ್ಗದ ಜನರು ಪ್ರೀತಿ ಪ್ರೇಮ ವಿಶ್ವಾಸ ದಿಂದ ಬಾಳಿ ಸದೃಢವಾದ ಭಾರತವನ್ನು ಕಟ್ಟುವ ಅವರ ಅಭಿಲಾಷೆಗೆ ನಾವು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಹಾಗೂ ಮುಂದೊಂದು ದಿನ ಅವರ ಜನ್ಮ ಅಮೃತ ಮಹೋತ್ಸವ ಹಾಗೂ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಅವರದ್ದಾಗಲಿ ಎಂದು ಮೋದಿಯವರಿಗೆ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.