ಚಿಕ್ಕಮಗಳೂರು : ತಮಿಳುನಾಡಿನ ಈ ಫೌಂಡೇಶನ್ ವತಿಯಿಂದ ಕಾವೇರಿ ಧ್ವನಿ ಕೂಗು ಎಂಬ ವಿಶೇಷ ಶೀರ್ಷಿಕೆಯಡಿ ಮರ ಆಧಾರಿತ ಕೃಷಿಯ ಪ್ರಯೋಜನವನ್ನು ಪಡೆದುಕೊಳ್ಳುವ ಯೋಜನೆಯ ಕುರಿತಾಗಿ ವಿಶೇಷ ಕಾರ್ಯಾಗಾರ ಆರಂಭವಾಗಿದೆ.


ಚಿಕ್ಕಮಗಳೂರು ಜಿಲ್ಲಾದ್ಯಂತ ಗ್ರಾಮಪಂಚಾಯಿತಿಗಳ ಮುಖೇನ ಜನರಿಗೆ ಮರ ಆಧಾರಿತ ಕೃಷಿ ಮಾಡುವುದರ ಪ್ರಯೋಜನಗಳ ಕುರಿತು ಹಾಗೂ ಕೃಷಿಯಿಂದ ಪಡೆಯಬಹುದಾದ ಲಾಭಗಳ ಕುರಿತಾದ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ನಿನ್ನೆ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಕಾವೇರಿ ಕೂಗು ಕಾರ್ಯಾಗಾರ ನಡೆಯಿತು.

ಈ ಕಾರ್ಯಾಗಾರದ ಮುಖ್ಯ ಉದ್ದೇಶ ಭೂಮಿಯ ಜಲ ಸಂಪನ್ಮೂಲವನ್ನು ಅಂತರ್ಜಲದ ಮುಖೇನ ವೃದ್ಧಿಸುವುದು ಹಾಗೂ ಉತ್ತಮ ಮರಗಳನ್ನು ಸಮಾಜದ ಒಳಿತಿಗಾಗಿ ನೀಡುವುದು ಎಂದು ಸಂಸ್ಥೆಯ ಸ್ವಯಂಸೇವಕರು ತಿಳಿಸಿದರು.

ಈ ರೀತಿಯ ಮರಾಧಾರಿತ ಕೃಷಿ ಮಾಡುವುದರಿಂದ ರೈತರಿಗೆ ದೊರೆಯುವ ಲಾಭವೂ ಹೆಚ್ಚಿರುತ್ತದೆ ಹಾಗೂ ಬೇರೆ ಬೆಳೆಗಳಿಗೆ ರೋಗ ತಗುಲುವ ಸಂಭವವೂ ಸಹ ಕಡಿಮೆ ಇರುತ್ತದೆ ಹಾಗೂ ಉತ್ತಮ ಇಳುವರಿ ದೊರೆಯುತ್ತದೆ ಮರ ಧಾರಿತ ಕೃಷಿಯಿಂದ ರೈತರು ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ಈಶಾ ಸಂಸ್ಥೆಯ ಕಾರ್ಯಕರ್ತ ಸಚಿನ್ ಗ್ರಾಮಸ್ಥರಿಗೆ ತಿಳಿಸಿದರು.