ಶಿವಮೊಗ್ಗ : ರೈಲಿಗೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಇಂದು ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ರೈಲ್ವೇ ಹಳಿಯ ಬಳಿ ನಡೆದಿದೆ.
ರೈಲ್ವೇ ಹಳಿ ದಾಟುವಾಗ ಚಲಿಸುತ್ತಿರುವ ರೈಲು ಹೊಡೆದು ರೈಲಿನ ವೇಗಕ್ಕೆ ಸಿಲುಕಿದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಹೊಂದಿದ ಮಹಿಳೆಯನ್ನು ನಾಗರತ್ನ ಬಾಯಿ ಎಂದು ಗುರುತಿಸಲಾಗಿದೆ. ಇವರ ಪತಿ ಶಾಮನಾಯ್ಕ ಎಂದು ತಿಳಿದುಬಂದಿದೆ. ಪತಿ ಪತ್ನಿಯರು ಒಂದು ವರ್ಷಗಳಿಂದ ದೂರವಿದ್ದರು ಎಂದು ಮಾಹಿತಿ ದೊರೆತಿದೆ. ನಾಗರತ್ನ ಬಾಯಿ ಅವರು ಜೀವನೋಪಾಯಕ್ಕಾಗಿ ಆಸ್ಪತ್ರೆಯೊಂದರಲ್ಲಿ ಆಯಾ ಕೆಲಸವನ್ನು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಶಿವಮೊಗ್ಗ ರೈಲ್ವೇ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



0 Comments